ಸರಕಾರಿ ಲಾಟರಿ ಆರಂಭಕ್ಕೆ ಹೆಚ್ಚಿದ ಒತ್ತಡ

ಬುಧವಾರ, 16 ಅಕ್ಟೋಬರ್ 2019 (19:10 IST)
ಈಗೀಗ ಕ್ರಿಕೆಟ್ ಬೆಟ್ಟಿಂಗ್ ಭಾರೀ ಜೋರಾಗಿ ನಡೆಯುತ್ತಿದೆ. ಮಟ್ಕಾ, ಆನ್ ಲೈನ್ ಲಾಟರಿ ಹಾವಳಿ ಮಿತಿ ಮೀರಿದೆ. ಇದರಿಂದ ಸರಕಾರಕ್ಕೆ ನಷ್ಟವಾಗುತ್ತಿದೆ.

ಸರಕಾರದ ಖಜಾನೆಗೆ ಹೆಚ್ಚು ಲಾಭ ತರೋದಕ್ಕೆ ಅಧಿಕೃತ ಲಾಟರಿ ಮಾರಾಟ ಮಾಡೋದಕ್ಕೆ ಮತ್ತೆ ಅನುಮತಿ ಕೊಡಬೇಕು. ಹೀಗಂತ ಆಗ್ರಹ ಕೇಳಿಬಂದಿದೆ.

ರಾಜ್ಯದಲ್ಲಿ 10 ಲಕ್ಷ ಲಾಟರಿ ಏಜೆಂಟರಿದ್ದಾರೆ. ಸರಕಾರದ ಬೊಕ್ಕಸಕ್ಕೆ ಪ್ರತಿವರ್ಷ 10 ಸಾವಿರ ಕೋಟಿ ಆದಾಯ ಹರಿದು ಬರಲಿದೆ.

ಹೀಗಾಗಿ ಸರಕಾರ ಅಧಿಕೃತ ಲಾಟರಿ ಮಾರಾಟಕ್ಕೆ ಮತ್ತೆ ಅವಕಾಶ ನೀಡಬೇಕೆಂದು ಲಾಟರಿ ಮಾರಾಟಗಾರರ ಸಂಘದ ರಾಜ್ಯ ಅಧ್ಯಕ್ಷ ಸಿ.ರಾಮಕೃಷ್ಣ ಅವರು ಬೆಂಗಳೂರಿನಲ್ಲಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜೆಡಿಎಸ್ ಗೆ ಬಿಗ್ ಶಾಕ್ : ಸಾ.ರಾ.ಮಹೇಶ್ ರಾಜೀನಾಮೆ?