Publish Date: Wed, 16 Oct 2019 (18:58 IST)
Updated Date: Wed, 16 Oct 2019 (18:59 IST)
ಈಗಾಗಲೇ ಒಂದೆಡೆ ಅನರ್ಹಗೊಂಡಿರೋ ಶಾಸಕರು ಜೆಡಿಎಸ್ ಗೆ ತಲೆ ನೋವು ತಂದಿದ್ದರೆ, ಈಗ ಮತ್ತೆ ಹಲವು ಶಾಸಕರು ರಾಜೀನಾಮೆ ನೀಡುತ್ತಿರೋದರಿಂದ ಜೆಡಿಎಸ್ ಗೆ ಬಿಗ್ ಶಾಕ್ ನೀಡಿದಂತಾಗಿದೆ.
ಜೆಡಿಎಸ್ ನ ಕುಟುಂಬ ರಾಜಕಾರಣದಿಂದ ಅಸಮಧಾನ ಹೊಂದಿರೋ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಾ.ರಾ.ಮಹೇಶ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಾ.ರಾ.ಮಹೇಶ್ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಪ್ತರಲ್ಲಿ ಪ್ರಮುಖವಾದವರು. ಇವರ ರಾಜೀನಾಮೆ ವಿಷಯ ಪಕ್ಷದ ಮುಖಂಡರಿಗೆ ಅಚ್ಚರಿ ಮೂಡಿಸಿದ್ದಾರೆ.
ರಾಜೀನಾಮೆಗೆ ನಿಖರ ಕಾರಣ ತಿಳಿಸದ ಮಹೇಶ್ ನಡೆ ಕುತೂಹಲ ಕೆರಳಿಸಿದೆ.