Publish Date: Wed, 16 Oct 2019 (16:19 IST)
Updated Date: Wed, 16 Oct 2019 (16:20 IST)
ಐವರು ಕಾಮುಕರು ಅಪ್ರಾಪ್ತ ಬಾಲಕಿಯೊಬ್ಬಳನ್ನು ಅತ್ಯಾಚಾರಕ್ಕೆ ಯತ್ನಿಸಿ ಲೈಂಗಿಕ ಕಿರುಕುಳ ನೀಡಿರೋ ಘಟನೆ ನಡೆದಿದೆ.
ಪುಸಲಾಯಿಸಿ ಬೈಕ್ ಮೇಲೆ ಅಪ್ರಾಪ್ತೆಯನ್ನು ಕರೆದುಕೊಂಡು ಹೋದವನನ್ನು ನಾಲ್ವರು ಸ್ನೇಹಿತರು ಹಿಂಬಾಲಿಸಿದ್ದಾರೆ.
ಸಾಮೂಹಿಕವಾಗಿ 14 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಹುಬ್ಬಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳ ಕೃತ್ಯದಿಂದ ನಲುಗಿರೋ ಹುಡುಗಿಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಹುಡುಗಿಗೆ ಪುಸಲಾಯಿತಿ ನಿಮ್ಮ ಪೋಷಕರು ಕರೆದುಕೊಂಡು ಬರಲು ಹೇಳಿದ್ದಾರೆ ಅಂತ ಬೈಕ್ ನಲ್ಲಿ ಕೂಡಿಸಿಕೊಂಡು ಹೋದ ಯುವಕ ಹಾಗೂ ಆತನ ಸ್ನೇಹಿತರು ನೀಚ ಕೆಲಸ ಮಾಡಿದ್ದಾರೆ.
ಕಸಬಾಪೇಟೆ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಕಾಮುಕರ ಪತ್ತೆ ಪೊಲೀಸರು ಮುಂದಾಗಿದ್ದಾರೆ.