Select Your Language

Notifications

webdunia
webdunia
webdunia
webdunia

ರಾಜ್ಯಕ್ಕೆ ಬಂತು ಹೈಟೆಕ್ ವರಹ

ರಾಜ್ಯಕ್ಕೆ ಬಂತು ಹೈಟೆಕ್ ವರಹ
ಮಂಗಳೂರು , ಬುಧವಾರ, 16 ಅಕ್ಟೋಬರ್ 2019 (16:26 IST)
ರಾಜ್ಯದ ಕಡಲ ತೀರದಲ್ಲಿ ಕಣ್ಗಾವಲಿಡಲು ಬಂದಿರೋ ಹೈಟೆಕ್ ಶಿಪ್ ಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.

ಮಂಗಳೂರು ಕಡಲ ತೀರಕ್ಕೆ ಕಣ್ಗಾವಲಿಗಾಗಿ ಅತ್ಯಾಧುನಿಕ ಹಡಗು ವರಹ ಎಂಬ ಶಿಪ್ ಆಗಮಿಸಿದೆ. ಈ ನೂತನ ಶಿಪ್ ನ್ನು ಪಣಂಬೂರು ಕೋಸ್ಟ್‌ಗಾರ್ಡ್ ಕೇಂದ್ರದಲ್ಲಿ ಹಿರಿಯ ಅಧಿಕಾರಿ ರಾಜ್ ಕಮಲ್ ಸಿನ್ಹಾ, ಲಕ್ಷ್ಮೀಕಾಂತ್ ಗಜಿಭಿಯೆ, ಸಿಐಎಸ್ಎಫ್ ಅಧಿಕಾರಿ ಅಶುತೋಷ್ ಗೌರ್ ಮೊದಲಾದವರು ಸ್ವಾಗತಿಸಿದ್ರು.  ಕರ್ನಾಟಕ ಕರಾವಳಿಯಲ್ಲಿ ಕಣ್ಗಾವಲು ಇಡಲಿದೆ.

ಲಾರ್ಸನ್ ಆ್ಯಂಡ್ ಟರ್ಬೊ ಈ ನೂತನ ಹಡಗನ್ನು ನಿರ್ಮಿಸಿದೆ. ಸಮುದ್ರ ಮಾರ್ಗದಲ್ಲಿ ಕಳ್ಳಸಾಗಾಣಿಕೆ, ತೈಲ ಸೋರಿಕೆ, ತಪಾಸಣೆ, ಭದ್ರತೆಯ ಕಣ್ಗಾವಲು ಇರಿಸಲು ಈ ಹಡಗು ಬಳಸಲಾಗುತ್ತದೆ. ತುರ್ತು ಸಂದರ್ಭ ಎರಡು ಎಂಜಿನ್ಗಳ ಹೆಲಿಕಾಪ್ಟರ್ ಹೊತ್ತೊಯ್ಯಬಲ್ಲ ಈ ಹಡಗು, 30 ಎಂಎಂ ಗನ್,12.7 ಎಂಎಂ ಗನ್, ಅತ್ಯಾಧುನಿಕ ರಾಡಾರ್, ಸೆನ್ಸಾರ್ , ಹೈಸ್ಪೀಡ್ ಬೋಟ್‌ಗಳು ಮತ್ತಿತರ ಸೌಲಭ್ಯ ಇದರಲ್ಲಿದೆ.‌ 14 ಅಧಿಕಾರಿಗಳು ಮತ್ತು 89 ಮಂದಿ ಸಿಬ್ಬಂದಿಯನ್ನು ಈ ಹಡಗು ಹೊಂದಿದೆ.

ಯಾವುದೇ ಕ್ಷಣದಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಲಿದೆ. ಪಶ್ಚಿಮ ಕೋಸ್ಟ್‌ಗಾರ್ಡ್ ಕಮಾಂಡಿಗ್ ಕೇಂದ್ರ ಇದರ ನಿಯಂತ್ರಣ ಹೊಂದಿದೆ. 2,100 ಟನ್ ಭಾರದ ಈ ಹಡಗು ಗಂಟೆಗೆ 26 ನಾಟಿಕಲ್ ಮೈಲ್ ವೇಗದಲ್ಲಿ ಸಂಚರಿಸುತ್ತದೆ.




Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತೆ ಮೇಲೆ ಐವರು ಕಾಮುಕರ ಅಟ್ಟಹಾಸ