Publish Date: Wed, 03 Jul 2019 (17:04 IST)
Updated Date: Wed, 03 Jul 2019 (17:07 IST)
ಭಾರೀ ತೂಕದ ಶಾರ್ಕ್ ಮೀನು ಕಂಡುಬಂದಿದ್ದು, ಜನರನ್ನು ಆಕರ್ಷಿಸುತ್ತಿದೆ.
ಮಂಗಳೂರಿನ ಕಡಲ ದಡದಲ್ಲಿ ಶಾರ್ಕ್ ಮೀನು ಪತ್ತೆಯಾಗಿದೆ. ಬೃಹತ್ ಗಾತ್ರದ ಶಾರ್ಕ್ ಮೀನು ಸುರತ್ಕಲ್ ಬಳಿಯ ಎನ್ ಐಟಿಕೆ ಬಳಿ ಪತ್ತೆಯಾಗಿದೆ.
ಶಾರ್ಕ್ ಮೀನನ್ನು ಕ್ರೇನ್ ಮೂಲಕ ದಡದಿಂದ ಎತ್ತಿದ್ದಾರೆ ಬೀಚ್ ಸಿಬ್ಬಂದಿಗಳು.
ಕಳೆದ ನಾಲ್ಕು ದಿನಗಳ ಹಿಂದೆ ಸಸಿಹಿತ್ಲು ಬೀಚ್ ನಲ್ಲೊಂದು ಸತ್ತ ಶಾರ್ಕ್ ಮೀನು ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ವಾರದೊಳಗೆ ಎರಡು ಸತ್ತ ಶಾರ್ಕ್ ಮೀನು ಮಂಗಳೂರು ಬೀಚ್ ನಲ್ಲಿ ಪತ್ತೆಯಾದಂತಾಗಿವೆ.