Select Your Language

Notifications

webdunia
webdunia
webdunia
webdunia

ಸಾಕ್ಷ್ಯ ನಾಶ ಆರೋಪದಡಿ ಸಚಿವ ಡಿ.ಕೆ ಶಿವಕುಮಾರ್‌ ಗೆ ನೋಟಿಸ್ ಜಾರಿ; ಹೈಕೋರ್ಟ್ ಆದೇಶ

ಸಾಕ್ಷ್ಯ ನಾಶ ಆರೋಪದಡಿ ಸಚಿವ ಡಿ.ಕೆ ಶಿವಕುಮಾರ್‌ ಗೆ ನೋಟಿಸ್ ಜಾರಿ; ಹೈಕೋರ್ಟ್ ಆದೇಶ
ಬೆಂಗಳೂರು , ಶನಿವಾರ, 29 ಜೂನ್ 2019 (11:50 IST)
ಬೆಂಗಳೂರು : ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಸಾಕ್ಷ್ಯ ನಾಶ ಮಾಡಿದ್ದಾರೆ ಎಂಬ ಆರೋಪದ ಮೇಲೆ ಸಚಿವ ಡಿ.ಕೆ ಶಿವಕುಮಾರ್‌ ಗೆ ನೋಟಿಸ್ ಜಾರಿ ಮಾಡಲು ಹೈಕೋರ್ಟ್ ಆದೇಶ ನೀಡಿದೆ.



2017ರ ಆಗಸ್ಟ್ 2ರಂದು ಬಿಡದಿ ಬಳಿಯ ಈಗಲ್‍ ಟನ್ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಸಚಿವ ಡಿ.ಕೆ ಶಿವಕುಮಾರ್ ಪೇಪರ್ ಒಂದನ್ನು ಹರಿದು ನುಂಗಿದ್ದರು. ಈ ಹಿನ್ನೆಲೆಯಲ್ಲಿ ಸಾಕ್ಷ್ಯ ನಾಶಪಡಿಸಿದ್ದಾರೆ ಎಂದು ಐಟಿ ಕೇಸ್ ದಾಖಲಿಸಿತ್ತು.

 

ಈ ಕೇಸ್ ನ ವಿಚಾರಣೆ ನಡೆಸಿದ ಆರ್ಥಿಕ ಅಪರಾಧಗಳ ನ್ಯಾಯಾಲಯ ಕ್ಲೀನ್‍ಚಿಟ್ ಕೊಟ್ಟಿತ್ತು. ಇದನ್ನು ಪ್ರಶ್ನಿಸಿ ಐಟಿ ಇಲಾಖೆ ಹೈಕೋರ್ಟ್ ಮೆಟ್ಟಿಲೇರಿತ್ತು. ಶುಕ್ರವಾರ ಈ ಕೇಸ್ ನ ವಿಚಾರಣೆ ನಡೆಸಿದ ಹೈಕೋರ್ಟ್ ಡಿ.ಕೆ.ಶಿವಕುಮಾರ್‌ ಗೆ ನೋಟಿಸ್ ಜಾರಿ ಮಾಡಲು ಆದೇಶ ನೀಡಿದೆ.
 


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಗ್ರಾಮ ವಾಸ್ತವ್ಯದ ಭದ್ರತಾ ವೈಫಲ್ಯದ ಹಿನ್ನೆಲೆ; ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತಿಗೆ ಆದೇಶ