ಯಾರು ಏನೇ ಹೇಳಲಿ, ಟೀಂ ಇಂಡಿಯಾ ನಾಳೆ ಕಿತ್ತಳೆ ಜೆರ್ಸಿ ತೊಡುವುದು ಪಕ್ಕಾ

ಶನಿವಾರ, 29 ಜೂನ್ 2019 (10:13 IST)
ಲಂಡನ್: ಇಂಗ್ಲೆಂಡ್ ವಿರುದ್ಧ ನಾಳೆ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಕಿತ್ತಳೆ ಬಣ್ಣದ ಜೆರ್ಸಿ ತೊಡುವುದು ಪಕ್ಕಾ ಆಗಿದೆ.


ಈ ಮೊದಲು ಕಿತ್ತಳೆ ಬಣ್ಣದ ಜೆರ್ಸಿ ಸುತ್ತ ರಾಜಕೀಯ ಬಣ್ಣ ಮೆತ್ತಿತ್ತು. ಟೀಂ ಇಂಡಿಯಾ ಜೆರ್ಸಿಯಲ್ಲೂ ಪ್ರಧಾನಿ ಮೋದಿ ಕೇಸರೀಕರಣ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದರು. ಹೀಗಾಗಿ ಭಾರತದ ಜೆರ್ಸಿ ಬಣ್ಣ ಬದಲಾಗುವುದೇ ಎಂಬ ಊಹಾಪೋಹವಿತ್ತು. ಆದರೆ ಅದಕ್ಕೆಲ್ಲಾ ಈಗ ತೆರೆ ಬಿದ್ದಿದೆ.

ಟೀಂ ಇಂಡಿಯಾ ಆಟಗಾರರು ಕಿತ್ತಳೆ ಜೆರ್ಸಿ ತೊಟ್ಟು ಫೋಟೋ ಸೆಷನ್ ಮಾಡಿದ್ದಾರೆ. ಅತಿಥೇಯ ಇಂಗ್ಲೆಂಡ್ ಹೊರತು ಉಳಿದೆಲ್ಲಾ ತಂಡಗಳೂ ಈ ಕೂಟದಲ್ಲಿ ಒಂದು ಪಂದ್ಯಕ್ಕೆ ತಮ್ಮ ಮಾಮೂಲಿ ಕಲರ್ ಜೆರ್ಸಿ ಬಿಟ್ಟು ಬೇರೆ ಬಣ್ಣದ ಜೆರ್ಸಿಯಲ್ಲಿ ಮಿಂಚಲಿವೆ. ಅದರಂತೆ ನಾಳೆ ಭಾರತದ ಸರದಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ‘ನಾಟೌಟ್’ ರೋಹಿತ್ ಶರ್ಮಾಗೆ ಔಟ್ ನೀಡಿದ ಅಂಪಾಯರ್ ಗೆ ಚೆನ್ನಾಗಿಯೇ ಅವಮಾನ ಮಾಡಿದ ಭಾರತೀಯ ಅಭಿಮಾನಿಗಳು!