Select Your Language

Notifications

webdunia
webdunia
webdunia
webdunia

ವಿಂಡೀಸ್ ಪಂದ್ಯದಲ್ಲಿ ತಾವು ನಾಟೌಟ್ ಎಂಬುದಕ್ಕೆ ಸಾಕ್ಷ್ಯ ಒದಗಿಸಿದ ರೋಹಿತ್ ಶರ್ಮಾ

ವಿಂಡೀಸ್ ಪಂದ್ಯದಲ್ಲಿ ತಾವು ನಾಟೌಟ್ ಎಂಬುದಕ್ಕೆ ಸಾಕ್ಷ್ಯ ಒದಗಿಸಿದ ರೋಹಿತ್ ಶರ್ಮಾ
ಲಂಡನ್ , ಶನಿವಾರ, 29 ಜೂನ್ 2019 (09:56 IST)
ಲಂಡನ್: ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾಗೆ ಡಿಆರ್ ಎಸ್ ಮೂಲಕ ಔಟ್ ತೀರ್ಪು ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಸಲಿಗೆ ಬಾಲ್ ಪ್ಯಾಡ್ ಗೆ ತಗುಲಿತ್ತೋ, ಬ್ಯಾಟ್ ಗೆ ತಲುಪಿತ್ತೋ ಎನ್ನುವುದರ ಬಗ್ಗೆ ಅನುಮಾನವಿತ್ತು.


ಆದರೆ ವಿಂಡೀಸ್ ನ ಡಿಆರ್ ಎಸ್ ಮನವಿ ಪುರಸ್ಕರಿಸಿ ಔಟ್ ತೀರ್ಪು ನೀಡಿದ್ದಕ್ಕೆ ರೋಹಿತ್ ಅಸಮಾಧಾನದಿಂದಲೇ ಹೊರನಡೆದಿದ್ದರು. ಈ ಬಗ್ಗೆ ಅವರೀಗ ಟ್ವೀಟ್ ಮಾಡಿದ್ದು, ಎರಡು ಫೋಟೋಗಳನ್ನು ಸಾಕ್ಷ್ಯವಾಗಿ ಪ್ರಕಟಿಸಿ ತಾವು ನಾಟೌಟ್ ಎಂದು ವಾದಿಸಿದ್ದಾರೆ.

ಎರಡು ಬೇರೆ ಬೇರೆ ಆಂಗಲ್ ನಲ್ಲಿರುವ ಫೋಟೋ ಪ್ರಕಟಿಸಿದ್ದು ಆ ಫೋಟೋದಲ್ಲಿ ಬಾಲ್ ಬ್ಯಾಟ್ ತಗುಲಿಲಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಈ ಫೋಟೋ ಮೂಲಕ ರೋಹಿತ್ ಏನೂ ಸಂದೇಶ ಬರೆಯದೇ ಹೋದರೂ ಈ ಮೂಲಕ ತಾವು ನಾಟೌಟ್ ಎಂದು ಪ್ರತಿಪಾದಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಂಗ್ಲಾ, ಶ್ರೀಲಂಕಾ ಎದುರು ಟೀಂ ಇಂಡಿಯಾ ಬೇಕೆಂದೇ ಸೋಲಲಿದೆ ಎಂದು ಗಂಭೀರ ಆರೋಪ ಮಾಡಿದ ಪಾಕ್ ಮಾಜಿ ಕ್ರಿಕೆಟಿಗ