Select Your Language

Notifications

webdunia
webdunia
webdunia
webdunia

ವಿಶ್ವಕಪ್ 2019: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಬೆಂಬಲಿಸಲು ಮೈದಾನಕ್ಕೆ ಬರಲಿರುವ ಪಾಕ್ ಅಭಿಮಾನಿಗಳು!

ವಿಶ್ವಕಪ್ 2019: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಬೆಂಬಲಿಸಲು ಮೈದಾನಕ್ಕೆ ಬರಲಿರುವ ಪಾಕ್ ಅಭಿಮಾನಿಗಳು!
ಲಂಡನ್ , ಶುಕ್ರವಾರ, 28 ಜೂನ್ 2019 (10:17 IST)
ಲಂಡನ್: ಭಾರತ ಮತ್ತು ಪಾಕಿಸ್ತಾನ ಎಂದರೆ ಸಾಂಪ್ರದಾಯಿಕ ಎದುರಾಳಿಗಳು. ಎಂದಾದರೂ ಪಾಕ್ ಅಭಿಮಾನಿಗಳು ಭಾರತ ಗೆಲ್ಲಲಿ ಎಂದು ಪ್ರಾರ್ಥಿಸುವುದು ಸಾಧ್ಯವೇ? ಆದರೆ ಭಾನುವಾರದ ಇಂಗ್ಲೆಂಡ್-ಭಾರತ ಪಂದ್ಯದಲ್ಲಿ ಅದೂ ಸಾಧ್ಯವಾಗುತ್ತಿದೆ!


ಭಾನುವಾರ ವಿಶ್ವಕಪ್ ಪಂದ್ಯದಲ್ಲಿ ಭಾರತ ಅತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸುತ್ತಿದೆ. ಆದರೆ ಈ ಪಂದ್ಯವನ್ನು ಭಾರತವೇ ಗೆಲ್ಲಬೇಕು ಎಂದು ಪಾಕ್ ಅಭಿಮಾನಿಗಳು ಮೈದಾನಕ್ಕೆ ಬಂದು ಭಾರತೀಯರನ್ನು ಬೆಂಬಲಿಸುತ್ತಿದ್ದಾರೆ.

ಇದಕ್ಕೆ ಕಾರಣ, ಈ ಪಂದ್ಯದಲ್ಲಿ ಇಂಗ್ಲೆಂಡ್ ಸೋತರಷ್ಟೇ ಪಾಕಿಸ್ತಾನಕ್ಕೆ ಸೆಮಿಫೈನಲ್ ಗೇರುವ ಸಾಧ್ಯತೆಯಿರುತ್ತದೆ. ಇದಕ್ಕಾಗಿಯೇ ನಾವು ಭಾರತವನ್ನು ಬೆಂಬಲಿಸುತ್ತೇವೆ ಎಂದು ಪಾಕ್ ಅಭಿಮಾನಿಗಳು ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಪ್ರಶ್ನೆಯೊಂದಕ್ಕೆ ಟ್ವಿಟರ್ ನಲ್ಲಿ ಉತ್ತರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ನ್ನು ಹಿಂದಿಕ್ಕಿದ ಟೀಂ ಇಂಡಿಯಾ ಈಗ ಏಕದಿನ ನಂ.1