Publish Date: Fri, 28 Jun 2019 (09:59 IST)
Updated Date: Fri, 28 Jun 2019 (10:01 IST)
ಲಂಡನ್: ಭಾರತ ಆಡುವ ಪಂದ್ಯಗಳಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಕಾಮೆಂಟರಿ ಮಾಡುತ್ತಿದ್ದರೆ ಎದುರಾಳಿಗಳಿಗೆ ಕೋಚ್ ಗಳ ಅಗತ್ಯವೇ ಇರದು!
ಹೀಗಂತ ಟ್ವಿಟರಿಗರು ಈಗ ಲೇವಡಿ ಮಾಡುತ್ತಿದ್ದಾರೆ. ಕಾರಣ ಕಾಮೆಂಟರಿ ಮಾಡುವ ಗಂಗೂಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡುವುದು ಹೇಗೆಂದು ಕರಾರುವಾಕ್ ಆಗಿ ಹೇಳುತ್ತಲೇ ಇರುತ್ತಾರೆ. ವಿಪರ್ಯಾಸವೆಂದರೆ ಗಂಗೂಲಿ ಹಾಗೆ ಹೇಳಿದ ಮರುಕ್ಷಣವೇ ಟೀಂ ಇಂಡಿಯಾ ವಿಕೆಟ್ ಕಳೆದುಕೊಳ್ಳುತ್ತದೆ.
ನಿನ್ನೆ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾರನ್ನು ಕಟ್ಟಿ ಹಾಕುವುದು ಹೇಗೆ ಎಂದು ಗಂಗೂಲಿ ವಿವರಿಸುತ್ತಿದ್ದರು. ರೋಹಿತ್ ಗೆ ವಿಕೆಟ್ ಆಸುಪಾಸಿನಲ್ಲೇ ಬಾಲ್ ಎಸೆಯುತ್ತಿದ್ದರೆ ಅವರ ವಿಕೆಟ್ ಕೀಳಬಹುದು ಎಂದು ಗಂಗೂಲಿ ಹೇಳಿದ್ದೇ ತಡ ವಿಂಡೀಸ್ ಬೌಲರ್ ಹೀಗೇ ಬಾಲ್ ಎಸೆದು ರೋಹಿತ್ ವಿಕೆಟ್ ಕಬಳಿಸಿದ್ದರು. ಇದನ್ನು ನೋಡಿ ರೋಹಿತ್ ಅಭಿಮಾನಿಗಳು ಗಂಗೂಲಿಯನ್ನು ಲೇವಡಿ ಮಾಡಿದ್ದಾರೆ. ಇದು ಕಾಕತಾಳೀಯವೇ ಇರಬಹುದು. ಆದರೆ ಗಂಗೂಲಿ ಮಾತ್ರ ರೋಹಿತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ನಿಜ.