Publish Date: Thu, 27 Jun 2019 (10:01 IST)
Updated Date: Thu, 27 Jun 2019 (14:46 IST)
ಲಂಡನ್: ಆಧುನಿಕ ಕ್ರಿಕೆಟ್ ನ ರನ್ ಮೆಷಿನ್ ಎಂದೇ ಜನ ಜನಿತವಾಗಿರುವ ವಿರಾಟ್ ಕೊಹ್ಲಿಯನ್ನು ಜನ ತಮ್ಮ ಆರಾಧ್ಯ ದೈವ ಎಂದೇ ತಿಳಿದಿದ್ದಾರೆ. ಆದರೆ ಇಂಗ್ಲೆಂಡ್ ನ ಮಾಜಿ ಕ್ರಿಕೆಟಿಗ ಗ್ರೇಮ್ ಸ್ವಾನ್ ಕೊಹ್ಲಿಯನ್ನು ಜೀಸಸ್ ಗೆ ಹೋಲಿಸಿದ್ದಾರೆ!
ಚಾಟ್ ಶೋ ಒಂದರಲ್ಲಿ ಸ್ವಾನ್ ವಿಶ್ವಕಪ್ ಪಂದ್ಯದಲ್ಲಿ ಕೊಹ್ಲಿಯ ಆನ್ ಫೀಲ್ಡ್ ವರ್ತನೆಯನ್ನು ನೋಡಿ ಆಧುನಿಕ ಜೀಸಸ್ ಎಂಬ ಬಿರುದು ಕೊಟ್ಟಿದ್ದಾರೆ. ಅದರಲ್ಲೂ ಪಾಕಿಸ್ತಾನ ವಿರುದ್ಧ ಮೊಹಮ್ಮದ್ ಅಮೀರ್ ಬೌಲಿಂಗ್ ನಲ್ಲಿ ಅಂಪಾಯರ್ ತೀರ್ಪಿಗೂ ಕಾಯದೇ ತಾವಾಗಿಯೇ ಔಟ್ ಎಂದು ಕ್ರೀಸ್ ಬಿಟ್ಟ ಕೊಹ್ಲಿಯ ಉದಾರ ಮನೋಭಾವವನ್ನು ನೋಡಿ ಸ್ವಾನ್ ಈ ರೀತಿ ಹೊಗಳಿದ್ದಾರೆ.
‘ಸಾಮಾನ್ಯವಾಗಿ ಬ್ಯಾಟ್ಸ್ ಮನ್ ಗಳು ತಮಗೆ ಔಟ್ ಎಂದು ಗೊತ್ತಿದ್ದರೂ ಅಂಪಾಯರ್ ಹೇಳುವವರೆಗೂ ಕ್ರೀಸ್ ಬಿಟ್ಟು ಕದಲುವುದಿಲ್ಲ. ಆದರೆ ಕೊಹ್ಲಿಯ ಉದಾರ ಮನೋಭಾವ ನೋಡಿದರೆ ಅವರು ಆಧುನಿಕ ಜೀಸಸ್ ಎನಿಸುತ್ತದೆ’ ಎಂದು ಸ್ವಾನ್ ಹೊಗಳಿದ್ದಾರೆ.