Select Your Language

Notifications

webdunia
webdunia
webdunia
webdunia

ವಿಶ್ವಕಪ್ ಕ್ರಿಕೆಟ್ 2019: ಟೀಂ ಇಂಡಿಯಾಗೆ ಅಚ್ಚರಿ ಫಲಿತಾಂಶ ನೀಡುವ ವಿಂಡೀಸ್ ಎದುರಾಳಿ

ವಿಶ್ವಕಪ್ ಕ್ರಿಕೆಟ್ 2019: ಟೀಂ ಇಂಡಿಯಾಗೆ ಅಚ್ಚರಿ ಫಲಿತಾಂಶ ನೀಡುವ ವಿಂಡೀಸ್ ಎದುರಾಳಿ
ಲಂಡನ್ , ಬುಧವಾರ, 26 ಜೂನ್ 2019 (09:43 IST)
ಲಂಡನ್: ವಿಶ್ವಕಪ್ 2019 ರ ಕಣದಲ್ಲಿ ನಾಳೆ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ನ್ನು ಎದುರಿಸಲಿದೆ. ಹಲವು ಅಚ್ಚರಿ ಫಲಿತಾಂಶ ನೀಡುವ ಕಾರಣಕ್ಕೆ ವಿಂಡೀಸ್ ವಿರುದ್ಧ ಟೀಂ ಇಂಡಿಯಾ ಎಚ್ಚರಿಕೆಯಿಂದ ಸೆಣಸಬೇಕಿದೆ.


ಈಗಾಗಲೇ ಅಫ್ಘಾನಿಸ್ತಾನ ವಿರುದ್ಧ ಭಾರತದ ಬ್ಯಾಟಿಂಗ್ ಹುಳುಕುಗಳು ಬಯಲಾಗಿದೆ. ಕಳೆದ ಪಂದ್ಯದಲ್ಲಿ ಪ್ರಯಾಸಕರ ಗೆಲುವು ಸಾಧಿಸಿದ್ದ ಟೀಂ ಇಂಡಿಯಾಗೆ ವಿಂಡೀಸ್ ವೇಗಿಗಳನ್ನು ಎದುರಿಸುವ ಸವಾಲು ಎದುರಾಗಿದೆ. ಆರಂಭಿಕರು ಅಡಿಪಾಯ ಹಾಕದೇ ಹೋದರೆ ಟೀಂ ಇಂಡಿಯಾ ಬ್ಯಾಟಿಂಗ್ ಕುಂಟುತ್ತದೆ ಎನ್ನುವುದು ಎದುರಾಳಿಗಳಿಗೂ ಗೊತ್ತಾಗಿದೆ.

ಹೀಗಾಗಿ ಟೀಂ ಇಂಡಿಯಾ ಎಚ್ಚರಿಕೆಯ ಹೆಜ್ಜೆಯಿಡಬೇಕಿದೆ. ಅದರಲ್ಲೂ ಭಾರತೀಯ ಬೌಲರ್ ಗಳಿಗೆ ವಿಂಡೀಸ್ ನ ಶೈನ್ ಹೋಪ್ ಮತ್ತು ಹೆಟ್ ಮೈರ್ ಕಟ್ಟಿಹಾಕುವುದು ಸವಾಲಾಗಲಿದೆ. ಇವರಿಬ್ಬರನ್ನು ಕಟ್ಟಿಹಾಕಿದರೆ ವಿಂಡೀಸ್ ನ್ನು ನಿಯಂತ್ರಿಸುವುದು ಸುಲಭ. ಸದ್ಯಕ್ಕೆ ಭಾರತೀಯ ಬೌಲರ್ ಗಳು ಫಾರ್ಮ್ ನಲ್ಲಿದ್ದಾರೆ. ಈ ಪಂದ್ಯವನ್ನೂ ಗೆದ್ದರೆ ಭಾರತದ ಸೆಮಿಫೈನಲ್ ಹಾದಿ ಸುಗಮವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಬಗ್ಗೆ ಹೇಳಿಕೆ ನೀಡಿದ ಸಚಿನ್ ವಿರುದ್ಧ ಅಭಿಮಾನಿಗಳು ಗರಂ