Select Your Language

Notifications

webdunia
webdunia
webdunia
webdunia

ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾ ಸೋತಿದ್ದರೆ ಈ ರೀತಿಯೆಲ್ಲಾ ಕತೆ ಹುಟ್ಟಿಕೊಳ್ಳುತ್ತಿತ್ತು!

ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾ ಸೋತಿದ್ದರೆ ಈ ರೀತಿಯೆಲ್ಲಾ ಕತೆ ಹುಟ್ಟಿಕೊಳ್ಳುತ್ತಿತ್ತು!
ಲಂಡನ್ , ಮಂಗಳವಾರ, 25 ಜೂನ್ 2019 (09:23 IST)
ಲಂಡನ್: ಅಫ್ಘಾನಿಸ್ತಾನ ವಿರುದ್ಧ ಮೊನ್ನೆ ನಡೆದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕವಾಗಿ ಕೊನೆಯ ಹಂತದಲ್ಲಿ ಗೆಲುವು ಕಂಡಿತ್ತು. ಒಂದು ವೇಳೆ ಈ ಪಂದ್ಯ ಸೋತಿದ್ದರೆ ಕತೆಯೇ ಬೇರೆ ಆಗುತ್ತಿತ್ತು ಎಂದು ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಹೇಳಿದ್ದಾರೆ.


ಒಂದು ವೇಳೆ ಭಾರತ ಈ ಪಂದ್ಯವನ್ನು ಸೋತಿದ್ದರೆ ಏನೆಲ್ಲಾ ಸುಳ್ಳಿನ ಕತೆ, ರೂಮರ್ ಗಳು ಹಬ್ಬುತ್ತಿದ್ದವು ಎಂದು ಊಹಿಸಲೂ ಸಾಧ್ಯವಿಲ್ಲ. ಕೆಲವರು ಇದಕ್ಕಾಗಿಯೇ ಕಾಯುತ್ತಿರುತ್ತಾರೆ. ಆಟಗಾರರ ಬಗ್ಗೆ ಅವರ ಬದ್ಧತೆ ಬಗ್ಗೆ ಕತೆ ಕಟ್ಟಿ ಮಾತನಾಡುತ್ತಿದ್ದರು ಎಂದು ಶೊಯೇಬ್ ಅಭಿಪ್ರಾಯ ಪಟ್ಟಿದ್ದಾರೆ.

ಈ ನಡುವೆ ಈ ಪಂದ್ಯದಲ್ಲಿ ಧೋನಿ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಅಖ್ತರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡಾ ಧೋನಿ ಇನಿಂಗ್ಸ್ ಗೆ ಬೇಸರ ವ್ಯಕ್ತಪಡಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸೋತ ದ.ಆಫ್ರಿಕಾ ತಂಡದೊಳಗಿನ ಅಸಮಾಧಾನಗಳು ಬಹಿರಂಗ