Publish Date: Mon, 24 Jun 2019 (09:33 IST)
Updated Date: Mon, 24 Jun 2019 (09:37 IST)
ಲಂಡನ್: ಅಫ್ಘಾನಿಸ್ತಾನದ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಅತಿಯಾಗಿ ಅಪೀಲ್ ಮಾಡಿದ್ದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ದಂಡ ವಿಧಿಸಲಾಗಿದೆ.
ಅಫ್ಘಾನಿಸ್ತಾನದ ಇನಿಂಗ್ಸ್ ವೇಳೆ 29 ನೇ ಓವರ್ ನಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯು ಅಪೀಲ್ ಮಾಡುವಾಗ ಕೊಹ್ಲಿ ಅಂಪಾಯರ್ ಬಳಿ ಮುನ್ನುಗ್ಗಿ ಅತಿರೇಕದ ವರ್ತನೆ ತೋರಿದ್ದರು.
ಈ ರೀತಿ ಆಕ್ರಮಣಕಾರಿ ವರ್ತನೆ ತೋರಿದ್ದಕ್ಕೆ ಪಂದ್ಯದ ಸಂಭಾವನೆಯಲ್ಲಿ ಶೇ.25 ರಷ್ಟು ಕಡಿತದ ಶಿಕ್ಷೆ ನೀಡಲಾಗಿದೆ. ಈ ಪಂದ್ಯವನ್ನು ಭಾರತ ಪ್ರಯಾಸಕರವಾಗಿ ಗೆದ್ದಿತ್ತು.