Publish Date: Sat, 22 Jun 2019 (09:18 IST)
Updated Date: Sat, 22 Jun 2019 (09:21 IST)
ಲಂಡನ್: ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾದ ಆರಂಭಿಕರಾಗಿರುವ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಆಟದ ಟೆಕ್ನಿಕ್ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಆದರೆ ಉತ್ತಮವಾಗಿ ಆಡುತ್ತಿರುವಾಗ ಇದ್ದಕ್ಕಿದ್ದಂತೆ ಕೆಟ್ಟ ಹೊಡೆತವೊಂದಕ್ಕೆ ಕೈ ಹಾಕಿ ಸುಲಭವಾಗಿ ವಿಕೆಟ್ ಕೈ ಚೆಲ್ಲುವ ರಾಹುಲ್ ಖಯಾಲಿಯನ್ನು ಹಲವರು ಟೀಕಿಸುತ್ತಾರೆ. ಆ ಸಾಲಿಗೆ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕಾರ್ ಕೂಡಾ ಸೇರಿದ್ದಾರೆ.
‘ರಾಹುಲ್ ಗೆ ಸಾಮರ್ಥ್ಯವಿದೆ. ಅವರು ಶತಕ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ನಡುವೆ ಕೆಟ್ಟ ಹೊಡೆತವೊಂದಕ್ಕೆ ಕೈ ಹಾಕಿ ಸ್ಟುಪಿಡ್ ಆಗಿ ವಿಕೆಟ್ ಕೈ ಚೆಲ್ಲುತ್ತಾರೆ. ಅವರು ಕೆಲವೊಂದು ಸ್ಟುಪಿಡ್ ಹೊಡೆತ ಹೊಡೆಯುತ್ತಾರೆ’ ಎಂದು ದಿಲೀಪ್ ಅಭಿಪ್ರಾಯಪಟ್ಟಿದ್ದಾರೆ.