Select Your Language

Notifications

webdunia
webdunia
webdunia
webdunia

ವಿಶ್ವಕಪ್ 2019: ಟೀಂ ಇಂಡಿಯಾಕ್ಕಿಂದು ದುರ್ಬಲ ಅಫ್ಘಾನಿಸ್ತಾನ ಎದುರಾಳಿ

ವಿಶ್ವಕಪ್ 2019: ಟೀಂ ಇಂಡಿಯಾಕ್ಕಿಂದು ದುರ್ಬಲ ಅಫ್ಘಾನಿಸ್ತಾನ ಎದುರಾಳಿ
ಲಂಡನ್ , ಶನಿವಾರ, 22 ಜೂನ್ 2019 (09:09 IST)
ಲಂಡನ್: ವಿಶ್ವಕಪ್ ಕೂಟದಲ್ಲಿ ಕಿರು ಅವಧಿಯ ಬ್ರೇಕ್ ನ ನಂತರ ಇಂದು ಟೀಂ ಇಂಡಿಯಾ ತನ್ನ ನಾಲ್ಕನೇ ಪಂದ್ಯವನ್ನು ದುರ್ಬಲ ಅಫ್ಘಾನಿಸ್ತಾನದ ವಿರುದ್ಧ ಆಡಲಿದೆ.


ಈಗಾಗಲೇ ಗಾಯದಿಂದಾಗಿ ತಂಡದ ಸಮತೋಲನ ಕಾಯ್ದುಕೊಳ್ಳುವ ತಲೆಬಿಸಿಯಲ್ಲಿರುವ ನಾಯಕ ಕೊಹ್ಲಿ ಈ ಪಂದ್ಯವನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಕಾಣುವುದಿಲ್ಲ ಎಂದಿದ್ದಾರೆ. ಟೀಂ ಇಂಡಿಯಾಗೆ ಇದುವರೆಗೆ ಸೋಲು ಕಾಡಿಲ್ಲ. ಹೀಗಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಇದು ಸದವಕಾಶವಾಗಲಿದೆ.

ಇನ್ನು ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿರುವ ಶಿಖರ್ ಧವನ್ ಸ್ಥಾನದಲ್ಲಿ ಕೆಎಲ್ ರಾಹುಲ್ ಕಳೆದ ಪಂದ್ಯದಲ್ಲಿ ಆಡಿ ಆ ಸ್ಥಾನಕ್ಕೆ ತಾವೇ ಸೂಕ್ತ ಎಂದು ಸಾಬೀತುಪಡಿಸಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ಗಾಯಗೊಂಡಿರುವ ಭುವನೇಶ್ವರ್ ಕುಮಾರ್ ಸ್ಥಾನದಲ್ಲಿ ಮೊಹಮ್ಮದ್ ಶಮಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಅಲ್ಲದೆ, ಆಲ್ ರೌಂಡರ್ ವಿಜಯ್ ಶಂಕರ್ ಗಾಯ ಗಂಭೀರವಲ್ಲದ ಕಾರಣ  ಅವರು ಇಂದಿನ ಪಂದ್ಯಕ್ಕೆ ಲಭ್ಯರಾಗುವುದು ಬಹುತೇಕ ಖಚಿತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಪಾಕ್ ಪಂದ್ಯದ ವೇಳೆ ಗೆಳತಿಗೆ ಪ್ರಪೋಸ್ ಮಾಡಿದ ಗೆಳೆಯ