Publish Date: Fri, 21 Jun 2019 (19:07 IST)
Updated Date: Fri, 21 Jun 2019 (19:11 IST)
ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಭಾರತೀಯ ಕ್ರಿಕೆಟ್ ಅಭಿಮಾನಿಯೊಬ್ಬ ತನ್ನ ಗೆಳತಿಗೆ ಪ್ರಪೋಸ್ ಮಾಡಿರುವುದು ಬಹಿರಂಗವಾಗಿದೆ. ಮದುವೆಗಳು ಸ್ವರ್ಗದಲ್ಲಿ ನಡೆಯುತ್ತೇವೆ ಎಂದು ಹೇಳಲಾಗುತ್ತಿತ್ತು. ಇದೀಗ ಕ್ರೀಡಾಂಗಣದಲ್ಲೂ ಕೂಡಾ ಪ್ರಪೋಸ್ ಮಾಡುವಂತಹ ದೃಶ್ಯಗಳು ಕಂಡುಬರುತ್ತಿವೆ.
ಗೆಳತಿ ಕುಳಿತಿದ್ದ ಸ್ಥಳಕ್ಕೆ ಬಂದ ಗೆಳೆಯ ಆಕೆಗೆ ಪ್ರಪೋಸ್ ಮಾಡಿದ್ದಲ್ಲದೇ ಕೈಬೆರಳಿಗೆ ಉಂಗುರು ತೊಡಿಸಿದಾಗ ಅಲ್ಲಿದ್ದ ಕ್ರಿಕೆಟ್ ಅಭಿಮಾನಿಗಳು ತುಂಬು ಹೃದಯದಿಂದ ಹಾರೈಸಿದರು.
ಗೆಳತಿಯನ್ನು ತಬ್ಬಿಕೊಂಡು ಮುತ್ತಿನ ಮಳೆಗೆರೆದ ಗೆಳೆಯನಿಗೆ ಪ್ರೇಕ್ಷಕರು ಭರ್ಜರಿ ಬೆಂಬಲ ಸೂಚಿಸಿ ಭಾವಿ ದಂಪತಿಗಳಿಗೆ ಶುಭಕೋರಿದರು.
ಕ್ರೀಡಾಂಗಣದ ಪೆವಿಲಿಯನ್ನಲ್ಲಿ ಕುಳಿತ ಎಲ್ಲರ ಹರ್ಷೋದ್ಗಾರಗಳ ಮಧ್ಯೆ, ಭಾರತ-ಪಾಕಿಸ್ತಾನದ ಅವಿಸ್ಮರಣೀಯ ಐತಿಹಾಸಿಕ ಪಂದ್ಯದ ಗೆಲುವು ಕೂಡಾ ಭಾವಿ ದಂಪತಿಗಳಿಗೆ ಕೊಡುಗೆಯಾಗಿ ಬಂದಿತು.