Select Your Language

Notifications

webdunia
webdunia
webdunia
webdunia

ಭಾರತ-ಪಾಕ್ ಪಂದ್ಯಕ್ಕೂ ಮೊದಲು ಮೈದಾನಕ್ಕೆ ಬಂದ ಸಚಿನ್ ತೆಂಡುಲ್ಕರ್ ನೋಡಿ ಪ್ರೇಕ್ಷಕರ ಹರ್ಷೋದ್ಗಾರ

ಭಾರತ-ಪಾಕ್ ಪಂದ್ಯಕ್ಕೂ ಮೊದಲು ಮೈದಾನಕ್ಕೆ ಬಂದ ಸಚಿನ್ ತೆಂಡುಲ್ಕರ್ ನೋಡಿ ಪ್ರೇಕ್ಷಕರ ಹರ್ಷೋದ್ಗಾರ
ಲಂಡನ್ , ಸೋಮವಾರ, 17 ಜೂನ್ 2019 (08:47 IST)
ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವೆ ನಿನ್ನೆ ನಡೆದ ವಿಶ್ವಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಸ್ಟಾರ್ ಆಟಗಾರರ ಆಟ ನೋಡಲು ಬಂದಿದ್ದ ಪ್ರೇಕ್ಷಕರಿಗೆ ಅಚ್ಚರಿ ಕಾದಿತ್ತು.


ಭಾರತ-ಪಾಕ್ ಪಂದ್ಯವೆಂದರೆ ನೆನಪಾಗುವುದು ಸಚಿನ್ ತೆಂಡುಲ್ಕರ್. ಪಾಕ್ ವಿರುದ್ಧ ಅದೆಷ್ಟೋ ಸ್ಮರಣೀಯ ಇನಿಂಗ್ಸ್ ಆಡಿದ ಸಚಿನ್ ನಿನ್ನೆಯ ಪಂದ್ಯ ಆರಂಭಕ್ಕೂ ಮೊದಲು ಮೈದಾನದಲ್ಲಿ ಕಾಣಿಸಿಕೊಂಡಾಗ ಪ್ರೇಕ್ಷಕರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಸಚಿನ್ ಬೌಂಡರಿ ಗೆರೆ ಬಳಿ ಸಾಗುತ್ತಿದ್ದಾಗ ಸಚಿನ್ ಸಚಿನ್ ಎಂದು ಎರಡೂ ದೇಶಗಳ ಅಭಿಮಾನಿಗಳು ಕೂಗಿ ದಿಗ್ಗಜ ಆಟಗಾರನಿಗೆ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಪದೇ ಪದೇ ಪಿಚ್ ನಡುವೆ ಓಡಿ ಅಂಪಾಯರ್ ಗಳಿಂದ ವಾರ್ನಿಂಗ್ ಪಡೆದ ಪಾಕ್