Select Your Language

Notifications

webdunia
webdunia
webdunia
webdunia

ವಿಶ್ವಕಪ್ 2019: ಕೂದಲೆಳೆಯಲ್ಲಿ ಬಚವಾದ ಟೀಂ ಇಂಡಿಯಾ ಕ್ರಿಕೆಟಿಗ ವಿಜಯ್ ಶಂಕರ್!

World Cup 2019: Vijay Shankar faces injury scare
ಲಂಡನ್ , ಶುಕ್ರವಾರ, 21 ಜೂನ್ 2019 (10:56 IST)
ಲಂಡನ್: ವಿಶ್ವಕಪ್ 2019 ರ ಆರಂಭದಲ್ಲಿಯೇ ಗಾಯಕ್ಕೆ ತುತ್ತಾಗಿದ್ದ ಆಲ್ ರೌಂಡರ್ ವಿಜಯ್ ಶಂಕರ್ ಇದೀಗ ಮತ್ತೆ ಗಾಯದ ಭೀತಿಗೊಳಗಾಗಿದ್ದಾರೆ.

 
ಈಗಾಗಲೇ ಶಿಖರ್ ಧವನ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಟೀಂ ಇಂಡಿಯಾಕ್ಕೆ ವಿಜಯ್ ಶಂಕರ್ ರೂಪದಲ್ಲಿ ಮತ್ತೊಂದು ಶಾಕ್ ಸಿಗುವ ಸಾಧ್ಯತೆಯಿತ್ತು.

ನೆಟ್ ಪ್ರಾಕ್ಟೀಸ್ ಮಾಡುವಾಗ ವೇಗಿ ಜಸ್ಪ್ರೀತ್ ಬುಮ್ರಾ ಯಾರ್ಕರ್ ನೇರವಾಗಿ ವಿಜಯ್ ಶಂಕರ್ ಹೆಬ್ಬರಳಿಗೆ ತಾಕಿ ಕೆಲವು ಕಾಲ ನೋವು ಅನುಭವಿಸಿದ್ದರು. ಆದರೆ ವಿಜಯ್ ಬಳಿಕ ಚೇತರಿಸಿಕೊಂಡಿದ್ದು, ಗಾಯ ಗಂಭೀರವಲ್ಲ ಎಂದು ತಿಳಿದುಬಂದಿದೆ. ಒಂದು ವೇಳೆ ವಿಜಯ್ ಶಂಕರ್ ಗೆ ಗಂಭೀರ ಗಾಯವಾಗಿದ್ದರೆ ಟೀಂ ಇಂಡಿಯಾಕ್ಕೆ ಮತ್ತೊಂದು ಸಂಕಷ್ಟ ಎದುರಾಗುತ್ತಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಇದೀಗ ಪಕ್ಕಾ! ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಪಂದ್ಯಕ್ಕೆ ಟೀಂ ಇಂಡಿಯಾ ಜೆರ್ಸಿ ಬಣ್ಣ ಬದಲು