Publish Date: Thu, 20 Jun 2019 (10:15 IST)
Updated Date: Thu, 20 Jun 2019 (10:55 IST)
ಚೆನ್ನೈ: ಈ ಬಾರಿ ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಟ್ರಂಪ್ ಕಾರ್ಡ್ ಆಗಬೇಕಿದ್ದ ಗಬ್ಬರ್ ಸಿಂಗ್ ಶಿಖರ್ ಧವನ್ ಗಾಯದಿಂದಾಗಿ ಕೂಟದಿಂದಲೇ ಹೊರನಡೆದಿದ್ದಾರೆ.
ತಾವು ವಿಶ್ವಕಪ್ ನಿಂದ ಹೊರಬೀಳುತ್ತಿದ್ದಂತೆ ಭಾವುಕರಾಗಿ ವಿಡಿಯೋ ಸಂದೇಶ ನೀಡಿರುವ ಧವನ್ ಹೊರ ಹೋಗುತ್ತಿರುವುದಕ್ಕೆ ಬೇಸರವಾಗುತ್ತಿದೆ. ನಿಮ್ಮೆಲ್ಲರ ಪ್ರೀತಿಗೆ ಅಭಾರಿ ಎಂದಿದ್ದರು.
ಧವನ್ ಹೊರಹೋಗುತ್ತಿರುವುದಕ್ಕೆ ತಮಿಳು ನಟ ಧನುಷ್ ಮತ್ತು ಸಿದ್ಧಾರ್ಥ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟ ಧನುಷ್ ‘ಇದು ತುಂಬಾ ಕಠಿಣ ಸನ್ನಿವೇಶ. ನಿನಗೆ ಶಕ್ತಿ ನೀಡಲಿ ಸಹೋದರ. ಈಗಾಗಲೇ ನೀನು ಈ ಮಹತ್ವದ ಕೂಟದಲ್ಲಿ ನಿನ್ನ ಕೊಡುಗೆ ನೀಡಿರುವೆ’ ಎಂದು ಬರೆದುಕೊಂಡಿದ್ದಾರೆ.