Publish Date: Wed, 19 Jun 2019 (10:23 IST)
Updated Date: Wed, 19 Jun 2019 (10:25 IST)
ಲಂಡನ್: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಆಗಾಗ ತಮ್ಮ ಫ್ಯಾಶನ್ ಸೆನ್ಸ್ ನಿಂದಾಗಿಯೇ ಸುದ್ದಿಯಾಗುತ್ತಾರೆ. ಇದೀಗ ವಿಶ್ವಕಪ್ ನಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಿರುವ ಪಾಂಡ್ಯ ಈ ಬಾರಿ ಕಪ್ ಗೆದ್ದೇ ಗೆಲ್ಲಬೇಕು ಎಂಬ ಛಲ ಹೊಂದಿದ್ದಾರೆ.
ಮಹತ್ವದ ಕೂಟದ ಸಂದರ್ಭದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ವಿಶೇಷ ಹೇರ್ ಸ್ಟೈಲ್ ಮಾಡಿಸಿಕೊಳ್ಳುವುದು ಸಾಮಾನ್ಯ. ಆದರೆ ಪಾಂಡ್ಯ ವಿಶ್ವಕಪ್ ಗಾಗಿಯೇ ಸ್ಪೆಷಲ್ ನೆಕ್ಲೇಸ್ ಒಂದನ್ನು ಮಾಡಿಸಿಕೊಂಡು ಕುತ್ತಿಗೆಗೆ ಹಾಕಿಕೊಂಡಿದ್ದಾರೆ.
ಇದನ್ನು ಯಜುವೇಂದ್ರ ಚಾಹಲ್ ನಡೆಸಿಕೊಡುವ ‘ಚಾಹಲ್ ಟಿವಿ’ ಸಂದರ್ಶನದಲ್ಲಿ ಪಾಂಡ್ಯ ಬಹಿರಂಗಪಡಿಸಿದ್ದಾರೆ. ಡೈಮಂಡ್ ನಿಂದ ಚಿಕ್ಕದಾಗಿ ಮಾಡಿರುವ ಬ್ಯಾಟ್ ಮತ್ತು ಬಾಲ್ ನ ಪೆಂಡೆಂಟ್ ಇರುವ ನೆಕ್ಲೇಸ್ ನ್ನು ಪಾಂಡ್ಯ ಧರಿಸಿದ್ದಾರೆ. ಈ ನೆಕ್ಲೇಸ್ ನ ವಿಶೇಷತೆಗಳನ್ನು ಸಂದರ್ಶನದಲ್ಲಿ ಪಾಂಡ್ಯ ವಿವರಿಸಿದ್ದಾರೆ. ಪಾಂಡ್ಯರ ನೆಕ್ಲೇಸ್ ನೋಡಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹುಷಾರ್.. ಆದಾಯ ತೆರಿಗೆ ವಿಭಾಗದವರು ನಿನ್ನ ಅಡ್ರೆಸ್ ಹುಡುಕಿಕೊಂಡು ಬಂದಾರು ಎಂದು ತಮಾಷೆ ಮಾಡುತ್ತಿದ್ದಾರೆ.