ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಕ್ಕೂ ಮೊದಲು ಪತಿ, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಮತ್ತು ಇತರ ಪಾಕ್ ಕ್ರಿಕೆಟಿಗರ ಜತೆ ರೆಸ್ಟೋರೆಂಟ್ ಒಂದರಲ್ಲಿ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಡಿನ್ನರ್ ಮಾಡಿದ್ದರು.
ಈ ಡಿನ್ನರ್ ಟೇಬಲ್ ವಿಡಿಯೋವನ್ನು ಟ್ವಿಟರಿಗರೊಬ್ಬರು ವಿಡಿಯೋ ಮಾಡಿ ಪ್ರಕಟಿಸಿದ್ದರು. ಈ ವಿಡಿಯೋ ವೈರಲ್ ಕೂಡಾ ಆಗಿತ್ತು. ಆದರೆ ಈ ವಿಡಿಯೋ ಈಗ ಸಾನಿಯಾ ಗಮನಕ್ಕೆ ಬಂದಿದ್ದು, ವಿಡಿಯೋ ಮಾಡಿದವರ ವಿರುದ್ಧ ಸಿಡಿದೆದ್ದಿದ್ದಾರೆ.
‘ನನ್ನ ಒಪ್ಪಿಗೆಯಿಲ್ಲದೇ ಅದೂ ಮಗುವಿನ ಜತೆಯಲ್ಲಿರುವಾಗ ವಿಡಿಯೋ ಮಾಡಿ ಹಾಕಿದ್ದೇಕೆ? ವಿಡಿಯೋ ಮಾಡುವ ಮೊದಲು ನಮ್ಮ ಒಪ್ಪಿಗೆ ಕೇಳಬೇಕಿತ್ತು. ಒಂದು ಪಂದ್ಯ ಸೋತರೆ ಜನರಿಗೆ ಊಟ ಮಾಡಲೂ ಹಕ್ಕಿಲ್ಲವೇ? ನಾವು ಕೇವಲ ಊಟ ಮಾಡುತ್ತಿದ್ದೆವಷ್ಟೇ. ಮುಂದಿನ ಬಾರಿ ಸ್ವಲ್ಪ ಪ್ರಬುದ್ಧವಾಗಿ ಯೋಚಿಸಿ’ ಎಂದು ಸಾನಿಯಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.