Select Your Language

Notifications

webdunia
webdunia
webdunia
webdunia

ವಿಶ್ವಕಪ್ 2019: ಮುಂದಿನ ಕೆಲವು ಪಂದ್ಯಗಳಿಂದ ವೇಗಿ ಭುವನೇಶ್ವರ್ ಕುಮಾರ್ ಔಟ್

ವಿಶ್ವಕಪ್ 2019: ಮುಂದಿನ ಕೆಲವು ಪಂದ್ಯಗಳಿಂದ ವೇಗಿ ಭುವನೇಶ್ವರ್ ಕುಮಾರ್ ಔಟ್
ಲಂಡನ್ , ಸೋಮವಾರ, 17 ಜೂನ್ 2019 (09:50 IST)
ಲಂಡನ್: ವಿಶ್ವಕಪ್ ಕೂಟದಲ್ಲಿ ಒಂದೆಡೆ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿದ್ದರೆ ಇನ್ನೊಂದೆಡೆ ಗಾಯಾಳುಗಳ ಸಂಖ್ಯೆ ಹೆಚ್ಚುತ್ತಿರುವುದು ಚಿಂತೆಗೆ ಕಾರಣವಾಗಿದೆ.


ಆರಂಭಿಕ ಶಿಖರ್ ಧವನ್ ಹೆಬ್ಬೆರಳಿನ ಮುರಿತಕ್ಕೊಳಗಾಗಿ ಮೂರು ವಾರ ಕ್ರಿಕೆಟ್ ನಿಂದ ದೂರವುಳಿಯಬೇಕಾಗಿ ಬಂದಿತ್ತು. ಇದೀಗ ವೇಗಿ ಭುವನೇಶ್ವರ್ ಕುಮಾರ್ ಗಾಯಗೊಂಡಿದ್ದಾರೆ.

 ನಿನ್ನೆ ಪಾಕ್ ವಿರುದ್ಧದ ಪಂದ್ಯದಲ್ಲಿ ಮೂರನೇ ಓವರ್ ಬೌಲಿಂಗ್ ಮಾಡುತ್ತಿದ್ದಾಗ ಭುವಿ ಸ್ನಾಯು ಸೆಳೆತಕ್ಕೊಳಗಾಗಿ ಅರ್ಧಕ್ಕೇ ಬೌಲಿಂಗ್ ನಿಲ್ಲಿಸಿ ಪೆವಿಲಿಯನ್ ಗೆ ಮರಳಿದ್ದರು. ಇದೀಗ ಅವರು ಮುಂದಿನ ಎರಡು ಅಥವಾ ಮೂರು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಭುವಿ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್-ಸಿಧು ಜೋಡಿಯ ದಾಖಲೆ ಮುರಿದ ರೋಹಿತ್ ಶರ್ಮಾ-ಕೆಎಲ್ ರಾಹುಲ್