Publish Date: Mon, 17 Jun 2019 (08:55 IST)
Updated Date: Mon, 17 Jun 2019 (08:57 IST)
ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಸಚಿನ್ ತೆಂಡುಲ್ಕರ್ ಮತ್ತು ನವಜೋತ್ ಸಿಂಗ್ ಸಿಧು ದಾಖಲೆಯೊಂದನ್ನು ಮುರಿದಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರಾಹುಲ್-ರೋಹಿತ್ ಜೋಡಿ 136 ರನ್ ಗಳ ಜತೆಯಾಟವಾಡಿದ್ದರು. ಆ ಮೂಲಕ ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಭಾರತದ ಆರಂಭಿಕ ಜೋಡಿಯೊಂದು ಮಾಡಿದ ಗರಿಷ್ಠ ಜತೆಯಾಟವೆಂಬ ದಾಖಲೆ ಮಾಡಿದರು.
ಇದಕ್ಕೂ ಮೊದಲು 1996 ವಿಶ್ವಕಪ್ ನಲ್ಲಿ ಸಚಿನ್ –ಸಿಧು ಜೋಡಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ 90 ರನ್ ಗಳ ಜತೆಯಾಟವಾಡಿದ್ದೇ ಗರಿಷ್ಠ ಆರಂಭಿಕ ರನ್ ಜತೆಯಾಟವಾಗಿತ್ತು. ಇದೀಗ ರೋಹಿತ್-ರಾಹುಲ್ ಜೋಡಿ ಈ ದಾಖಲೆ ಮುರಿದಿದ್ದಾರೆ.