Select Your Language

Notifications

webdunia
webdunia
webdunia
webdunia

ವಿಶ್ವಕಪ್ 2019: ಅಭಿಮಾನಿಯೊಂದಿಗೆ ಅಫ್ಘಾನಿಸ್ತಾನ ಕ್ರಿಕೆಟಿಗರ ಹೊಡೆದಾಟ

ವಿಶ್ವಕಪ್ 2019: ಅಭಿಮಾನಿಯೊಂದಿಗೆ ಅಫ್ಘಾನಿಸ್ತಾನ ಕ್ರಿಕೆಟಿಗರ ಹೊಡೆದಾಟ
ಲಂಡನ್ , ಗುರುವಾರ, 20 ಜೂನ್ 2019 (09:10 IST)
ಲಂಡನ್: ವಿಶ್ವಕಪ್ ಕೂಟದಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ದುರ್ಬಲ ಅಫ್ಘಾನಿಸ್ತಾನ ಕ್ರಿಕೆಟಿಗರು ತಾವು ವಾಸ್ತವ್ಯವಿದ್ದ ಹೋಟೆಲ್ ನಲ್ಲಿ ಅಭಿಮಾನಿಯೊಬ್ಬನಿಗೆ ಥಳಿಸಿದ ಘಟನೆ ವರದಿಯಾಗಿದೆ.


ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದ ಹಿಂದಿನ ದಿನ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಭಿಮಾನಿಯೊಬ್ಬ ಫೋಟೋ ತೆಗೆಯಲು ಯತ್ನಿಸಿದಾಗ ಕ್ರಿಕೆಟಿಗರು ಆತನ ಜತೆ ಮಾತಿನ ಚಕಮಕಿ ನಡೆಸಿದ್ದಾರೆ. ಇದು ಹೊಡೆದಾಟದಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ. ಆದರೆ ಇದನ್ನು ಅಫ್ಘಾನಿಸ್ತಾನ ತಂಡದ ನಾಯಕ ಗುಲ್ಬದಿನ್ ನಿರಾಕರಿಸಿದ್ದಾರೆ.

ಆದರೆ ಪೊಲೀಸರ ಪ್ರಕಾರ ವಾಗ್ವಾದ ಮತ್ತು ಹೊಡೆದಾಟವೂ ನಡೆದಿತ್ತು ಎನ್ನಲಾಗಿದೆ. ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ನಿಂದ ಹೊರಬಿದ್ದ ಶಿಖರ್ ಧವನ್ ಗೆ ಸಚಿನ್ ತೆಂಡುಲ್ಕರ್ ಸಾಂತ್ವನ