Publish Date: Wed, 19 Jun 2019 (10:30 IST)
Updated Date: Wed, 19 Jun 2019 (10:33 IST)
ಲಂಡನ್: ಟೀಂ ಇಂಡಿಯಾ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ 89 ರನ್ ಗಳ ಹೀನಾಯ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 9 ನೇ ಸ್ಥಾನಕ್ಕಿಳಿದಿರುವ ಪಾಕ್ ಕ್ರಿಕೆಟಿಗರನ್ನು ಅಲ್ಲಿನ ಅಭಿಮಾನಿಗಳು ಬಾಯಿಗೆ ಬಂದಂತೆ ಟೀಕಿಸುತ್ತಿದ್ದಾರೆ.
ಟೀಕೆಗಳಿಂದ ಬೇಸತ್ತಿರುವ ಕ್ರಿಕೆಟಿಗರು ಈಗ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಮನವಿಗಳ ಮೇಲೆ ಮನವಿ ಮಾಡುತ್ತಿದ್ದಾರೆ. ಶೊಯೇಬ್ ಮಲಿಕ್ ಬಳಿಕ ಇದೀಗ ವೇಗಿ ಮೊಹಮ್ಮದ್ ಅಮೀರ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
‘ದಯವಿಟ್ಟು ನಮ್ಮನ್ನು ಕೆಟ್ಟ ಶಬ್ಧಗಳಲ್ಲಿ ನಿಂದಿಸಬೇಡಿ. ಬೇಕಿದ್ದರೆ ನಮ್ಮ ಪ್ರದರ್ಶನದ ಬಗ್ಗೆ ವಿಮರ್ಶಿಸಿ. ಆದರೆ ಬೈಬೇಡಿ ಪ್ಲೀಸ್. ದೇವರ ಕೃಪೆಯಿಂದ ಮುಂದಿನ ಪಂದ್ಯದಲ್ಲಿ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ’ ಎಂದು ಅಮೀರ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.