Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿದೆ ಎಂದು ಟ್ವೀಟ್ ಮಾಡಿ ಡಿಲೀಟ್ ಮಾಡಿದ ಪಾಕ್ ಬೌಲರ್ ಹಸನ್ ಅಲಿ

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿದೆ ಎಂದು ಟ್ವೀಟ್ ಮಾಡಿ ಡಿಲೀಟ್ ಮಾಡಿದ ಪಾಕ್ ಬೌಲರ್ ಹಸನ್ ಅಲಿ
ಲಂಡನ್ , ಶನಿವಾರ, 22 ಜೂನ್ 2019 (09:26 IST)
ಲಂಡನ್: ವಿಶ್ವಕಪ್ 2019 ರಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳ ಪೈಕಿ ಟೀಂ ಇಂಡಿಯಾವೂ ಒಂದು. ಆದರೆ ಪಾಕಿಸ್ತಾನ ಕ್ರಿಕೆಟಿಗ ಹಸನ್ ಅಲಿ ಹೀಗೆಂದು ಹೇಳಲು ಹೋಗಿ ನಂತರ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.


ಪಾಕ್ ಕ್ರಿಕೆಟಿಗರು ಮೊನ್ನೆಯಷ್ಟೇ ಟೀಂ ಇಂಡಿಯಾ ವಿರುದ್ಧ ಸೋತು ತವರಿನಲ್ಲಿ ಟೀಕೆ ಎದುರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಹಸನ್ ಅಲಿ ಈ ಬಾರಿ ಭಾರತದ ಕನಸು ನನಸಾಗಲಿದೆ ಎಂದಿದ್ದರು.

ಭಾರತೀಯ ಪತ್ರಕರ್ತರೊಬ್ಬರು ಟೀಂ ಇಂಡಿಯಾ ಗೆಲುವಿಗೆ ಅಭಿನಂದಿಸಿ ಟ್ವೀಟ್ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ್ದ ಹಸನ್ ‘ಈ ಬಾರಿ ನಿಮ್ಮ ಕನಸು ನನಸಾಗಲಿದೆ. ಅಭಿನಂದನೆಗಳು’ ಎಂದು ಬರೆದಿದ್ದರು. ಆದರೆ ಟ್ವೀಟ್ ವಿವಾದವಾಗುವ ಲಕ್ಷಣ ಕಾಣುತ್ತಿದ್ದಂತೇ ಅಲಿ ಡಿಲೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಅಂದ್ರೆ ಇಷ್ಟ, ಆದ್ರೆ ಅವರ ಸ್ಟುಪಿಡ್ ಶಾಟ್ ಗಳು ಇಷ್ಟವಾಗಲ್ಲ ಎಂದವರು ಯಾರು ಗೊತ್ತೇ?!