Publish Date: Sat, 22 Jun 2019 (09:41 IST)
Updated Date: Sat, 22 Jun 2019 (09:42 IST)
ಲಂಡನ್: ಅಫ್ಘಾನಿಸ್ತಾನ ವಿರುದ್ಧ ಇಂದು ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ ಮಾಡುವ ಸನಿಹ ಇದ್ದಾರೆ.
ಇಂದು ವಿರಾಟ್ 104 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 20 ಸಾವಿರ ರನ್ ಪೂರೈಸಿದ ವಿಶ್ವದ 13 ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಹಾಗೂ ಈ ದಾಖಲೆ ಮಾಡಿದ ಮೂರನೇ ಭಾರತೀಯ ಆಟಗಾರ ಎನಿಸಕೊಳ್ಳಲಿದ್ದಾರೆ.
ವಿಶ್ವ ಕ್ರಿಕೆಟಿಗರ ಪೈಕಿ ಈ ದಾಖಲೆ ಮಾಡಿದವರಲ್ಲಿ ಸಚಿನ್ ತೆಂಡುಲ್ಕರ್ ಬ್ರಿಯಾನ್ ಲಾರಾ ಅಗ್ರ ಸ್ಥಾನದಲ್ಲಿದ್ದಾರೆ. ಭಾರತೀಯ ಪೈಕಿ ಸಚಿನ್ ಹೊರತುಪಡಿಸಿದರೆ ರಾಹುಲ್ ದ್ರಾವಿಡ್ ಈ ದಾಖಲೆ ಮಾಡಿದ್ದರು. ಇದೀಗ ಆ ಸಾಲಿಗೆ ಕೊಹ್ಲಿಯೂ ಸೇರ್ಪಡೆಯಾಗಲಿದ್ದಾರೆ.