Publish Date: Fri, 21 Jun 2019 (10:11 IST)
Updated Date: Fri, 21 Jun 2019 (10:18 IST)
ಲಂಡನ್: ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಪಾಕಿಸ್ತಾನ ವಿರುದ್ಧ ಅದ್ಭುತ ಜಯ ಗಳಿಸಿದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಒಂದು ವಾರದ ಬಿಡುವು ಸಿಕ್ಕಿದೆ.
ಈ ಬಿಡುವಿನ ವೇಳೆಯನ್ನು ಕ್ರಿಕೆಟಿಗರು ಚೆನ್ನಾಗಿಯೇ ಸದುಪಯೋಗಪಡಿಸಿಕೊಂಡಿದ್ದಾರೆ. ಕೊಹ್ಲಿ ತಮ್ಮ ಪತ್ನಿ ಜತೆ ಸುತ್ತಾಡುತ್ತಿದ್ದರೆ, ಇನ್ನು ಕೆಲವು ಕ್ರಿಕೆಟಿಗರು ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ.
ಧೋನಿ, ಹಾರ್ದಿಕ್ ಪಾಂಡ್ಯ ಮತ್ತಿತರರು ತಮ್ಮ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ಯಜುವೇಂದ್ರ ಚಾಹಲ್, ವಿರಾಟ್ ಕೊಹ್ಲಿ ಸಹಿತ ಎಲ್ಲರೂ ಒಂದೇ ರೀತಿಯ ಹೇರ್ ಸ್ಟೈಲ್ ಮತ್ತು ದಾಡಿ ಬಿಟ್ಟುಕೊಂಡಿದ್ದಾರೆ. ಇವರ ಹೊಸ ಹೇರ್ ಸ್ಟೈಲ್ ಈಗ ಟ್ರೆಂಡ್ ಆಗುತ್ತಿದೆ.