Select Your Language

Notifications

webdunia
webdunia
webdunia
webdunia

ವಿಶ್ವಕಪ್‌ನಲ್ಲಿ ನನ್ನ ಅಧ್ಯಾಯ ಮುಕ್ತಾಯ, ತುಂಬಾ ನೋವಾಗಿದೆ: ಶಿಖರ್ ಧವನ್

ವಿಶ್ವಕಪ್‌ನಲ್ಲಿ ನನ್ನ ಅಧ್ಯಾಯ ಮುಕ್ತಾಯ, ತುಂಬಾ ನೋವಾಗಿದೆ: ಶಿಖರ್ ಧವನ್
ಬೆಂಗಳೂರು , ಗುರುವಾರ, 20 ಜೂನ್ 2019 (14:26 IST)
ವಿಶ್ವಕಪ್ ಪಂದ್ಯಾವಳಿಯಲ್ಲಿ ನನ್ನ ಅಧ್ಯಾಯ ಮುಕ್ತಗೊಂಡಿರುವುದಕ್ಕೆ ತುಂಬಾ ನೋವು ಮತ್ತು ನಿರಾಶೆಯಾಗಿದೆ ಎಂದು ಟೀಂ ಇಂಡಿಯಾ ತಂಡದ ಆಟಗಾರ ಶಿಖರ್ ಧವನ್ ಹೇಳಿದ್ದಾರೆ.
ನನ್ನ ಹೆಬ್ಬೆರಳಿಗಾದ ಗಾಯ ಸೂಕ್ತ ಸಮಯಕ್ಕೆ ಗುಣವಾಗಲಿಲ್ಲ. ನನಗೆ ವಿಶ್ವಕಪ್‌ ತಂಡದಿಂದ ಹೊರಬರುವುದು ಅನಿವಾರ್ಯವಾಯಿತು. ಇದಕ್ಕಿಂತ ದೊಡ್ಡ ನೋವು ಮತ್ತೊಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
 
ನನ್ನ ತಂಡದ ಆಟಗಾರರು ಮತ್ತು ಬಿಸಿಸಿಸಿಐ ಹಾಗೂ ಐಸಿಸಿ ನೀಡಿದ ಪ್ರೀತಿ ಬೆಂಬಲಕ್ಕೆ ದಾಸನಾಗಿದ್ದೇನೆ. ಕ್ರಿಕೆಟ್ ಅಭಿಮಾನಿಗಳಲ್ಲಿ ಕ್ಷಮೆಯಿರಲಿ. ಟೀಂ ಇಂಡಿಯಾ ತಂಡ ವಿಶ್ವಕಪ್ ಗೆಲ್ಲುವ ವಿಶ್ವಾಸವಿದೆ ಎಂದರು.
 
ಮುಂಬರುವ ಪಂದ್ಯಗಳಲ್ಲಿ ಟೀಂ ಇಂಡಿಯಾ ತಂಡ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ತಂಡಕ್ಕಿದೆ. ಟೀಂ ಇಂಡಿಯಾ ತಂಡ ಮೇರು ತಂಡವಾಗಿ ಹೊರಬರಲಿ ಎನ್ನುವುದೇ ನನ್ನ ಆಶಯವಾಗಿದೆ ಎಂದು ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಟ್ವಿಟ್ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಶಿಖರ್ ಧವನ್ ವಿಶ್ವಕಪ್ ನಿಂದ ಔಟಾಗಿದ್ದಕ್ಕೆ ಬೇಸರಗೊಂಡಿರುವ ತಮಿಳು ನಟರು!