Select Your Language

Notifications

webdunia
webdunia
webdunia
webdunia

ಧೋನಿ ಮೇಲೆ ಬೇಸರಗೊಂಡ ಸಚಿನ್ ತೆಂಡುಲ್ಕರ್

ಧೋನಿ ಮೇಲೆ ಬೇಸರಗೊಂಡ ಸಚಿನ್ ತೆಂಡುಲ್ಕರ್
ಲಂಡನ್ , ಸೋಮವಾರ, 24 ಜೂನ್ 2019 (09:57 IST)
ಲಂಡನ್: ಸದಾ ಧೋನಿ ಮತ್ತು ಟೀಂ ಇಂಡಿಯಾ ಕ್ರಿಕೆಟಿಗರ ಬೆನ್ನಿಗೇ ನಿಲ್ಲುವ ಸಚಿನ್ ತೆಂಡುಲ್ಕರ್ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಧೋನಿ ಮತ್ತು ಕೇದಾರ್ ಜಾಧವ್ ಆಡಿದ ರೀತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.


ಈಗಾಗಲೇ ಧೋನಿ ಈ ಪಂದ್ಯದಲ್ಲಿ ನಿಧಾನಗತಿಯ ಆಟವಾಡಿ 28 ರನ್ ಗಳಿಗೆ ಸ್ಟಂಪ್ ಔಟ್ ಆಗಿದ್ದಕ್ಕೆ ಟ್ರೋಲ್ ಗೊಳಗಾಗಿದ್ದಾರೆ. ಇದೀಗ ಸಚಿನ್ ಕೂಡಾ ಈ ಇಬ್ಬರು ಅನುಭವಿ ಆಟಗಾರರು ಗೊತ್ತುಗುರಿಯಿಲ್ಲದೇ ನಿಧಾನಗತಿಯ ಇನಿಂಗ್ಸ್ ಆಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಅದರಲ್ಲೂ ವಿಶೇಷವಾಗಿ ಧೋನಿ, ಜಾಧವ್ ಕೊಂಚ ಸಕಾರಾತ್ಮಕವಾಗಿ ಆಡಬೇಕಿತ್ತು ಎಂದು ಇವರಿಬ್ಬರ ನಿಧಾನಗತಿಯ ಇನಿಂಗ್ಸ್ ವಿರುದ್ಧ ಸಚಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಫ್ಘಾನಿಸ್ತಾನ ಅದ್ಭುತ ಗೆಲುವು ಎಂದ ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಿದ ಟ್ವಿಟರಿಗರು