Select Your Language

Notifications

webdunia
webdunia
webdunia
webdunia

ವಿಶ್ವಕಪ್ ಕ್ರಿಕೆಟ್ 2019 ರಿಂದ ಮೊದಲು ಹೊರಬಿದ್ದ ತಂಡ ದ.ಆಫ್ರಿಕಾ

ವಿಶ್ವಕಪ್ ಕ್ರಿಕೆಟ್ 2019 ರಿಂದ ಮೊದಲು ಹೊರಬಿದ್ದ ತಂಡ ದ.ಆಫ್ರಿಕಾ
ಲಂಡನ್ , ಸೋಮವಾರ, 24 ಜೂನ್ 2019 (09:45 IST)
ಲಂಡನ್: ಈ ಬಾರಿಯ ವಿಶ್ವಕಪ್ ನಲ್ಲಿ ಆರಂಭದಿಂದಲೂ ನಿರಾಶಾದಾಯಕ ಪ್ರದರ್ಶನವಿತ್ತಿದ್ದ ದ.ಆಫ್ರಿಕಾ ತಂಡ ನಿನ್ನೆ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಸೋತು ಕೂಟದಿಂದ ನಿರ್ಗಮಿಸಿದೆ.


ನಿನ್ನೆ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಆಫ್ರಿಕಾ 49 ರನ್ ಗಳ ಸೋಲುಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ದ.ಆಫ್ರಿಕಾ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದರೊಂದಿಗೆ ಆಡಿದ 7 ಪಂದ್ಯಗಳಲ್ಲಿ ಕೇವಲ 1 ಗೆಲುವು ಮತ್ತು 5 ಸೋಲುಗಳೊಂದಿಗೆ 3 ಅಂಕ ಪಡೆಯಲಷ್ಟೇ ಶಕ್ತವಾಯಿತು. ಹೀಗಾಗಿ ಕೂಟದಿಂದ ನಿರ್ಗಮಿಸಿತು. ಸದ್ಯಕ್ಕೆ ಅಂಕಪಟ್ಟಿಯಲ್ಲಿ ಆಫ್ರಿಕಾ 9 ನೇ ಸ್ಥಾನದಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತಿಯಾಗಿ ಅಪೀಲ್ ಮಾಡಿದ್ದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಶಿಕ್ಷೆ