Select Your Language

Notifications

webdunia
webdunia
webdunia
webdunia

ಸೆಮಿಫೈನಲ್ ಗೇರಲು ಟೀಂ ಇಂಡಿಯಾ ಬಗ್ಗುಬಡಿಯುವ ನಿರೀಕ್ಷೆಯಲ್ಲಿ ಬಾಂಗ್ಲಾದೇಶ

ಸೆಮಿಫೈನಲ್ ಗೇರಲು ಟೀಂ ಇಂಡಿಯಾ ಬಗ್ಗುಬಡಿಯುವ ನಿರೀಕ್ಷೆಯಲ್ಲಿ ಬಾಂಗ್ಲಾದೇಶ
ಲಂಡನ್ , ಮಂಗಳವಾರ, 25 ಜೂನ್ 2019 (10:10 IST)
ಲಂಡನ್: ವಿಶ್ವಕಪ್ 2019 ರಲ್ಲಿ ದೈತ್ಯ ಸಂಹಾರಿ ಎನಿಸಿಕೊಂಡಿರುವ ಬಾಂಗ್ಲಾದೇಶ ತಂಡಕ್ಕೆ ಈಗ ಸೆಮಿಫೈನಲ್ ಕನಸು ಚಿಗುರಿದೆ. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಬಾಂಗ್ಲಾ ನಿನ್ನೆ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು 62 ರನ್ ಗಳಿಂದ ಸೋಲಿಸಿದೆ.

 
ಈಗ ಅದರ ಸೆಮಿಫೈನಲ್ ಕನಸಿಗೆ ಜೀವ ಬಂದಿದೆ. ಬಾಂಗ್ಲಾದೇಶಕ್ಕೆ ಮುಂದಿನ ಪಂದ್ಯವಿರುವುದು ಟೀಂ ಇಂಡಿಯಾ ವಿರುದ್ಧ. ಜುಲೈ 2 ರಂದು ನಡೆಯಲಿರುವ ಈ ಪಂದ್ಯವನ್ನು ಗೆದ್ದರೆ ಬಾಂಗ್ಲಾ ಸೆಮಿಫೈನಲ್ ಹಾದಿ ಸುಗಮವಾಗಲಿದೆ.

ಇದಕ್ಕಾಗಿ 2007 ರ ವಿಶ್ವಕಪ್ ಫಲಿತಾಂಶ ಪುನರಾವರ್ತನೆಯಾಗುವ ನಿರೀಕ್ಷೆಯಲ್ಲಿ ಬಾಂಗ್ಲಾವಿದೆ. ಅಫ್ಘನ್ ಪಂದ್ಯದ ನಂತರ ಮಾತನಾಡಿರುವ ಬಾಂಗ್ಲಾದ ಅನುಭವಿ ಆಲ್ ರೌಂಡರ್ ಶಕೀಬ್ ಅಲ್ ಹಸನ್ ‘ಟೀಂ ಇಂಡಿಯಾ ಕಠಿಣ ತಂಡ. ಅವರನ್ನು ಸೋಲಿಸುವುದು ಸುಲಭವಲ್ಲ. ಆದರೆ ನಾವು ಅತ್ಯುತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ನಾವು ಅತ್ಯುತ್ತಮ ಪ್ರದರ್ಶನ ನೀಡಿದರೆ ಸೋಲಿಸುವುದು ಅಸಾಧ್ಯವಲ್ಲ’ ಎಂದು ಶಕೀಬ್ ಹೇಳಿಕೊಂಡಿದ್ದಾರೆ. ಹೀಗಾಗಿ ಈಗ ಭಾರತ ಕೂಡಾ ಬಾಂಗ್ಲಾವನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಕೆಗೆ ಬೇಸತ್ತು ಮರೆಯಾಗಿದ್ದ ಸಾನಿಯಾ ಮಿರ್ಜಾ ಸೋಷಿಯಲ್ ಮೀಡಿಯಾಗೆ ಮತ್ತೆ ಕಮ್ ಬ್ಯಾಕ್