Select Your Language

Notifications

webdunia
webdunia
webdunia
webdunia

ವಿಶ್ವಕಪ್ ಕ್ರಿಕೆಟ್ 2019: ಎರಡು ತಂಡಗಳ ಸೆಮಿಫೈನಲ್ ಭವಿಷ್ಯ ಈಗ ಟೀಂ ಇಂಡಿಯಾ ಕೈಯಲ್ಲಿ!

ವಿಶ್ವಕಪ್ ಕ್ರಿಕೆಟ್ 2019
ಲಂಡನ್ , ಗುರುವಾರ, 27 ಜೂನ್ 2019 (09:46 IST)
ಲಂಡನ್: ವಿಶ್ವಕಪ್ 2019 ರಲ್ಲಿ ಯಾವೆಲ್ಲಾ ತಂಡಗಳು ಸೆಮಿಫೈನಲ್ ಗೇರಬಹುದು ಎಂಬ ವಿಚಾರದಲ್ಲಿ ಇದೀಗ ಟೀಂ ಇಂಡಿಯಾ ಪಾತ್ರ ನಿರ್ಣಾಯಕವಾಗಲಿದೆ.


ನಾಲ್ಕನೇ ತಂಡಕ್ಕೆ ಈಗ ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವೆ ಪೈಪೋಟಿ ಶುರುವಾಗಿದೆ. ಆ ಪೈಕಿ ಇಂಗ್ಲೆಂಡ್ ಮತ್ತು ಬಾಂಗ್ಲಾ ಭವಿಷ್ಯ ಈಗ ಟೀಂ ಇಂಡಿಯಾ ವಿರುದ್ಧ ಆಡಲಿರುವ ಪಂದ್ಯದಲ್ಲಿ ನಿರ್ಣಯವಾಗಲಿದೆ.

ಜುಲೈ 2 ರಂದು ಬಾಂಗ್ಲಾದೇಶ ಭಾರತದ ವಿರುದ್ಧ ಸೆಣಸಲಿದ್ದು, ಆ ಪಂದ್ಯದಲ್ಲಿ ಗೆದ್ದರೆ ಅದರ ಸೆಮಿಫೈನಲ್ ಅವಕಾಶ ಹೆಚ್ಚಾಗಲಿದೆ. ಇತ್ತ ಇಂಗ್ಲೆಂಡ್ ಗೆ ಜುಲೈ 30 ರಂದು ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಗೆದ್ದರೆ ಸೆಮಿಫೈನಲ್ ಸ್ಥಾನ ಭದ್ರವಾಗಲಿದೆ. ಒಂದು ವೇಳೆ ಇಂಗ್ಲೆಂಡ್ ಈ ಪಂದ್ಯ ಸೋತರೆ ಮತ್ತೆ ಬಾಂಗ್ಲಾ ಮತ್ತು ಪಾಕ್ ಜತೆ ರನ್ ಸರಾಸರಿ ಅದೃಷ್ಟದ ಆಟವನ್ನು ನಂಬಿ ಕೂರಬೇಕಾಗುತ್ತದೆ.

ಇತ್ತ ಬಾಂಗ್ಲಾದೇಶಕ್ಕೂ ಟೀಂ ಇಂಡಿಯಾ ವಿರುದ್ಧ ಸೋತರೆ ಸೆಮಿಫೈನಲ್ ಹಾದಿ ಬಹುತೇಕ ಮುಚ್ಚಲಿದೆ. ಆಗ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ಪೈಪೋಟಿ ನಡೆಯಲಿದೆ. ಹೀಗಾಗಿ ಉಭಯ ತಂಡಗಳಿಗೆ ಈಗ ಟೀಂ ಇಂಡಿಯಾ ವಿರುದ್ಧದ ಪಂದ್ಯವೇ ನಿರ್ಣಾಯಕವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ತಂಡಕ್ಕೆ ಕೇಸರಿ ಬಣ್ಣದ ಜೆರ್ಸಿ: ವಿಪಕ್ಷಗಳ ವಾಗ್ದಾಳಿ