Publish Date: Wed, 26 Jun 2019 (11:43 IST)
Updated Date: Wed, 26 Jun 2019 (11:45 IST)
ಲಂಡನ್: ವಿಶ್ವಕಪ್ ಕೂಟದಲ್ಲಿ ಅತಿಥೇಯ ತಂಡವಾಗಿದ್ದುಕೊಂಡು ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದ ಇಂಗ್ಲೆಂಡ್ ಹೋರಾಟ ಲೀಗ್ ಹಂತದಲ್ಲಿಯೇ ಕೊನೆಯಾಗುವ ಭೀತಿಯಲ್ಲಿದೆ.
ಇಂಗ್ಲೆಂಡ್ ಇದುವರೆಗೆ ಆಡಿದ 7 ಪಂದ್ಯಗಳಿಂದ 4 ಗೆಲುವು 3 ಸೋಲುಗಳೊಂದಿಗೆ 8 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇತ್ತ ಬಾಂಗ್ಲಾದೇಶ, ಪಾಕಿಸ್ತಾನ ತಂಡಗಳೂ ಇಂಗ್ಲೆಂಡ್ ಸ್ಥಾನ ಕಬಳಿಸಲು ಹವಣಿಸುತ್ತಿವೆ.
ಇದೀಗ ಅತಿಥೇಯ ತಂಡಕ್ಕೆ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆ ಎದುರಾಗಿದೆ. ಇವುಗಳ ಪೈಕಿ ಒಂದು ಬಲಿಷ್ಠ ಟೀಂ ಇಂಡಿಯಾ ವಿರುದ್ಧದ ಪಂದ್ಯವಾಗಿದೆ. ಒಂದು ವೇಳೆ ಆ ಪಂದ್ಯ ಸೋತು ಇನ್ನೊಂದು ಗೆದ್ದರೆ ರನ್ ಸರಾಸರಿಯ ಆಧಾರದಲ್ಲಿ ಅದೃಷ್ಟವಿದ್ದರೆ ಸೆಮಿಫೈನಲ್ ಗೇರಬಹುದು. ನಿನ್ನೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 64 ರನ್ ಗಳ ಹೀನಾಯ ಸೋಲು ಅನುಭವಿಸಿದ ಇಂಗ್ಲೆಂಡ್ ಈ ಸಂಕಷ್ಟಕ್ಕೆ ಸಿಲುಕಿದೆ. ಅತ್ತ ಆಸೀಸ್ ಮೊದಲ ತಂಡವಾಗಿ ಸೆಮಿಫೈನಲ್ ಗೇರಿದೆ.