Publish Date: Wed, 03 Jul 2019 (16:55 IST)
Updated Date: Wed, 03 Jul 2019 (16:58 IST)
ಕ್ರೂರ ತಂದೆಯೊಬ್ಬ ತನ್ನ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಅವಳ ಬಟ್ಟೆ ಹರಿದ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಕಾಮುಕ ತಂದೆಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಮಗಳು ನಿತ್ಯ ಫೋನ್ ನಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದಳು. ನಸುಕಿನ 4 ಗಂಟೆಗೆ ಫೋನ್ ನಲ್ಲಿ ಮಾತನಾಡುತ್ತಿದ್ದಳು. ಇದನ್ನು ನೋಡಿ ಗರಂ ಆದ ತಂದೆ, ನಾನೇ ನಿನ್ನ ಜತೆ ಮಲಗ್ತೇನೆ.
ನಿನ್ನ ಲವರ್ ಆಗ್ತೀನಿ ಅಂತ ಹೇಳಿ ಮಗಳ ಮೈಮೇಲೆ ಬಿದ್ದು ಬಟ್ಟೆ ಹರಿದಿದ್ದಾನೆ.
ಆಗ 16 ವರ್ಷದ ಮಗಳು ಕೂಗಿಕೊಂಡಾಗ ಪತ್ನಿಗೆ ಎಚ್ಚರವಾಗಿದೆ. ಆಗ ನಡೆಯಬೇಕಿದ್ದ ಅನಾಹುತವನ್ನು ಪತ್ನಿ ತಪ್ಪಿಸಿದ್ದಾಳೆ. ಆರೋಪಿ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.