Publish Date: Wed, 26 Feb 2020 (17:58 IST)
Updated Date: Wed, 26 Feb 2020 (17:59 IST)
ಬಿಜೆಪಿ ಶಾಸಕ ಮನುಷ್ಯ ಜಾತಿಗೆ ಸೇರೇ ಇಲ್ಲ. ಹೀಗಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಖಾರವಾಗಿ ಟಾಂಗ್ ನೀಡಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಪಾಕಿಸ್ತಾನ ಏಜೆಂಟ್ ಅಂತ ಹೇಳಿಕೆ ನೀಡಿರೋ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾಂಗ್ರೆಸ್ ಕಿಡಿಕಾರುತ್ತಿದೆ.
ಮನುಷ್ಯ ಜಾತಿಗೆ ಯತ್ನಾಳ್ ಸೇರೇ ಇಲ್ಲ ಅಂತೆಲ್ಲಾ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವ್ಯಂಗ್ಯವಾಡಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರನಿಗೆ ಮಾತ್ರವಲ್ಲ, ದೇಶದ ಜನರಿಗೆ ಯತ್ನಾಳ್ ಅಪಮಾನ ಮಾಡಿದ್ದು, ದೇಶದ್ರೋಹದ ಹೇಳಿಕೆ ನೀಡಿದ್ದಾರೆ ಅಂತ ದೂರಿದ್ದಾರೆ.