Publish Date: Wed, 29 Apr 2026 (10:21 IST)
Updated Date: Wed, 29 Apr 2026 (10:25 IST)
ಬೆಂಗಳೂರು: ಬೆಂಗಳೂರಿನಲ್ಲಿ ಯಾಕೋ ಇತ್ತೀಚೆಗೆ ಕರಾವಳಿಯಂತೆ ವಿಪರೀತ ಸೆಖೆ, ಬಿಸಿಲು ಕಂಡುಬರುತ್ತಿದೆ? ಇದಕ್ಕೆ ಹಲವು ಕಾರಣಗಳಿವೆ. ಅವುಗಳ ಬಗ್ಗೆ ಇಲ್ಲಿದೆ ವಿವರ.
ಬೆಂಗಳೂರು ಒಂದು ಕಾಲದಲ್ಲಿ ಎಲ್ಲಾ ಕಾಲದಲ್ಲೂ ತಂಪು ವಾತಾವರಣ ಹೊಂದಿದ್ದ ಪ್ರದೇಶವಾಗಿತ್ತು. ಬೇಸಿಗೆಯಲ್ಲೂ ಅಷ್ಟೇನೂ ಸೆಖೆ, ಉರಿಬಿಸಿಲು ಕಂಡುಬರುತ್ತಿರಲಿಲ್ಲ. 2000 ರಲ್ಲಿ ಸರಾಸರಿ ಗರಿಷ್ಠ ತಾಪಮಾನ ದಾಖಲಾಗಿದ್ದು 35 ಡಿಗ್ರಿಯಷ್ಟು.
ಆದರೆ ಇತ್ತೀಚೆಗಿನ ದಿನಗಳಲ್ಲಿ ಏಪ್ರಿಲ್ ಆರಂಭದಲ್ಲಿಯೇ ಬೆಂಗಳೂರಿನಲ್ಲಿ ಈ ಪ್ರಮಾಣದ ಗರಿಷ್ಠ ತಾಪಮಾನ ಕಂಡುಬರುತ್ತಿದೆ. ಮೇ ತಿಂಗಳಲ್ಲಿ 40 ಡಿಗ್ರಿ ಆಸುಪಾಸು ಕಂಡುಬರುತ್ತದೆ.
ಬಿಸಿ ಹೆಚ್ಚಾಗಲು ಕಾರಣವೇನು
ಬೆಂಗಳೂರು ಒಂದು ಕಾಲದಲ್ಲಿ ಉದ್ಯಾನವನ ಎಂದೇ ಹೆಸರುವಾಸಿಯಾಗಿತ್ತು. ಆದರೆ ಈಗ ಮರಗಳು ವಿರಳವಾಗಿದೆ. ಕೆರೆಗಳನ್ನು ಒತ್ತುವರಿ ಮಾಡಲಾಗಿದೆ. ಎಲ್ಲಿ ನೋಡಿದರೂ ಬರೀ ಕಾಂಕ್ರೀಟ್ ಕಾಡು. ಜೊತೆಗೆ ವಾಹನ ದಟ್ಟಣೆ, ವಿದ್ಯುತ್ ಬಳಕೆ ಹೆಚ್ಚಳವಾಗಿದೆ. ಪರಿಣಾಮವಾಗಿ ವಾತಾವರಣ ಬಿಸಿಯಾಗಿದೆ.
ವಿಶೇಷವಾಗಿ ಬೆಂಗಳೂರು ಮಧ್ಯಭಾಗ ತಾಪಮಾನ ಹೆಚ್ಚಿನ ಪ್ರದೇಶಗಳು ಎಂದು ಗುರುತಿಸಲಾಗುತ್ತದೆ. ಮೆಜೆಸ್ಟಿಕ್, ಎಂಜಿ ರಸ್ತೆ, ಇಲೆಕ್ಟ್ರಾನಿಕ್ ಸಿಟಿ, ಇಂದಿರಾ ನಗರ ಈ ವಲಯದಲ್ಲಿ ಬರುತ್ತದೆ. ಯಾಕೆಂದರೆ ಇಲ್ಲಿ ವಾಹನದಟ್ಟಣೆ ಹೆಚ್ಚು, ಮರಗಳು ಕಡಿಮೆಯಾಗುತ್ತಿದೆ. ಬೆಂಗಳೂರಿನ ಮಧ್ಯಭಾಗಕ್ಕೆ ಹೋಲಿಸಿದರೆ ಹೊರವಲಯಗಳು ಇನ್ನೂ ತಕ್ಕಮಟ್ಟಿಗೆ ಹಸಿರು ಉಳಿಸಿಕೊಂಡಿದ್ದು ಕಡಿಮೆ ತಾಪಮಾನವಿರುವ ಪ್ರದೇಶಗಳಾಗಿವೆ.
ಪರಿಹಾರಗಳೇನು?
ಹೆಚ್ಚು ಮರಗಳನ್ನು ನೆಡುವುದು, ಆದಷ್ಟು ಸರ್ಕಾರಿ ವಾಹನಗಳ ಬಳಕೆ ಕಡಿಮೆ ಮಾಡುವುದು, ಮನೆಗಳಿಗೆ ಹಸಿರು ಛಾವಣಿಗಳನ್ನು ಅಳವಡಿಸುವುದು ಇದಕ್ಕಿರುವ ಪರಿಹಾರಗಳು.
ಮೇ ತಿಂಗಳಲ್ಲಿ ಬೆಂಗಳೂರಿನ ಗರಿಷ್ಠ ತಾಪಮಾನ 38-40 ಡಿಗ್ರಿಯವರೆಗೆ ತಲುಪುವ ಸಾಧ್ಯತೆಯಿದೆ ಎನ್ನುತ್ತಿದೆ ವರದಿಗಳು. ಇತ್ತೀಚೆಗೆ ಮಳೆ ಕೂಡಾ ಕಡಿಮೆಯಾಗಿರುವುದು ನೀರಿನ ಸಮಸ್ಯೆಯೂ ಹೆಚ್ಚಾಗಲು ಕಾರಣವಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ