Select Your Language

Notifications

webdunia
webdunia
webdunia
webdunia

Karnataka Weather: ವಾರಂತ್ಯಕ್ಕೆ ಈ ಜಿಲ್ಲೆಗಳಿಗೆ ಮಳೆಯ ಸೂಚನೆ

Karnataka Rains
ಬೆಂಗಳೂರು: ರಾಜ್ಯದಲ್ಲಿ ವಿಪರೀತ ತಾಪಮಾನ ಏರಿಕೆಯ ನಡುವೆಯೂ ಈಗ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ವಾರಂತ್ಯಕ್ಕೆ ಹವಾಮಾನ ಹೇಗಿರಲಿದೆ ಇಲ್ಲಿದೆ ವರದಿ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೂರ್ಯ ಕೆಂಡದ ಮಳೆ ಸುರಿಸುತ್ತಿದ್ದಾನೆ. ಕೆಲವು ಜಿಲ್ಲೆಗಳಲ್ಲಿ ತಾಪಮಾನ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇದರ ನಡುವೆಯೂ ಕೆಲವು ಜಿಲ್ಲೆಗಳಲ್ಲಿ ಸಣ್ಣ ಮಟ್ಟಿಗೆ ಮಳೆಯ ಸೂಚನೆಯಿದೆ.

ವಾರಂತ್ಯಕ್ಕೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಬೆಳಗಾವಿ, ಹಾವೇರಿ ಜಿಲ್ಲೆಗಳಲ್ಲಿ ಇಂದು ಅಥವಾ ನಾಳೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಸೂಚಿಸುತ್ತಿವೆ. ಉಳಿದ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣವಿರಲಿದೆ.

ರಾಯಚೂರಿನಲ್ಲಿ ವಾರಂತ್ಯಕ್ಕೆ ಗರಿಷ್ಠ ತಾಪಮಾನ 41 ಡಿಗ್ರಿಗೆ ಏರಿಕೆಯಾಗಲಿದೆ. ಬಳ್ಳಾರಿ, ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿಯವರೆಗೆ ತಲುಪಲಿದೆ. ಇಂದು ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 35 ಡಿಗ್ರಿ ತಲುಪಲಿದೆ. ಕನಿಷ್ಠ ತಾಪಮಾನ 22 ಡಿಗ್ರಿಯಷ್ಟಿರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಜಿ ಕರ್ ರೇಪ್ ಆಂಡ್ ಮರ್ಡರ್ ಸಂತ್ರಸ್ತ ಯುವತಿಯ ತಾಯಿ ಕಾಲಿಗೆ ಬೀಳಲು ಬಂದಾಗ ಪ್ರಧಾನಿ ಮೋದಿ ಮಾಡಿದ್ದೇನು Video