Publish Date: Mon, 20 Apr 2026 (08:37 IST)
Updated Date: Mon, 20 Apr 2026 (08:40 IST)
ಬೆಂಗಳೂರು: ರಾಜ್ಯದಲ್ಲಿ ವಿಪರೀತ ತಾಪಮಾನದ ಏರಿಕೆಯಾಗುತ್ತಿದೆ. ಇದರ ನಡುವೆಯೂ ಅಲ್ಲಲ್ಲಿ ಮಳೆಯ ಸೂಚನೆಯಿದೆ. ಈ ವಾರದ ಆರಂಭದಲ್ಲೇ ಕೆಲವು ಜಿಲ್ಲೆಗಳಲ್ಲಿ ಮಳೆಯ ಸೂಚನೆಯಿದೆ. ಇಲ್ಲಿದೆ ವಾರದ ಹವಾಮಾನ ವರದಿ.
ಒಂದೆಡೆ ವಿಪರೀತ ಬಿಸಿಲು, ಸೆಖೆಯಿಂದ ಜನರು ತತ್ತರಿಸುತ್ತಿದ್ದರೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ಸಣ್ಣ ಮಳೆಯ ಸೂಚನೆಯೂ ಕಂಡುಬರುತ್ತಿದೆ. ತಾಪಮಾನ ಕಳೆದ ವಾರವೂ 40 ಡಿಗ್ರಿ ದಾಟಿತ್ತು. ಈ ವಾರವೂ ಕೆಲವು ಜಿಲ್ಲೆಗಳಲ್ಲಿ ತಾಪಮಾನ ಗರಿಷ್ಠ ಮಟ್ಟ ತಲುಪಲಿದೆ.
ಇದರ ನಡುವೆಯೂ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಬೆಳಗಾವಿ ಜಿಲ್ಲೆಗಳಲ್ಲಿ ವಾರದ ಆರಂಭದಲ್ಲಿ ಸಣ್ಣ ಮಳೆಯಾಗುವ ಸೂಚನೆಯಿದೆ. ಉಳಿದ ಜಿಲ್ಲೆಗಳಲ್ಲಿ ಉರಿಬಿಸಿಲಿನ ವಾತಾವರಣ ಮುಂದುವರಿಯಲಿದೆ.
ರಾಯಚೂರು, ಯಾದಗಿರಿ, ಕಲಬುರಗಿ, ಬಳ್ಳಾರಿ ಜಿಲ್ಲೆಗಳಲ್ಲಿ ಈ ವಾರ ಗರಿಷ್ಠ ತಾಪಮಾನ 39-40 ಡಿಗ್ರಿಯಷ್ಟು ಕಂಡುಬರಲಿದೆ. ಈ ವಾರವಿಡೀ ರಾಜ್ಯದ ಗರಿಷ್ಠ ತಾಪಮಾನ ಸರಾಸರಿ 34-35 ಡಿಗ್ರಿಯಷ್ಟು ಇರಲಿದೆ. ಕನಿಷ್ಠ ತಾಪಮಾನ 21-22 ಡಿಗ್ರಿಯಷ್ಟು ಇರಲಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ