Daily Horoscope

Select Your Language

Notifications

webdunia
webdunia
webdunia
webdunia

ಲೋಕಲ್ ಅಂಗಡಿಯಲ್ಲಿ 10 ರೂ ಕೊಟ್ಟು ಝುಲ್ಮುರಿ ಖರೀದಿಸಿ ಸುತ್ತಲಿದ್ದವರಿಗೂ ಹಂಚಿದ ಪ್ರಧಾನಿ ಮೋದಿ Video

PM Modi
Photo Credit: X
ಕೋಲ್ಕತ್ತಾ: ಪಶ್ಚಿಮ ಬಂಗಾಲದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ ಪ್ರಧಾನಿ ಮೋದಿ ಲೋಕಲ್ ಅಂಗಡಿಯೊಂದರಲ್ಲಿ ಚುರುಮುರಿ ಖರೀದಿಸಿ ಸುತ್ತಲಿದ್ದವರಿಗೂ ಹಂಚಿ ಖುಷಿಪಟ್ಟಿದ್ದಾರೆ.

ಪಶ್ಚಿಮ ಬಂಗಾಲದಲ್ಲಿ ಚುನಾವಣೆ ಕಾವು ಜೋರಾಗಿದೆ. ಇಂದು ಪಶ್ಚಿಮ ಬಂಗಾಳದಲ್ಲಿ ಬಿರುಸಿನ ಪ್ರಚಾರ ನಡೆಸಿದ ಪ್ರಧಾನಿ ಮೋದಿ ಪುರುಲಿಯಾದಲ್ಲಿ ರೋಡ್ ಶೋ ಕೂಡಾ ನಡೆಸಿದ್ದಾರೆ. ಈ ವೇಳೆ ಸಾಕಷ್ಟು ಜನ ಬಿಸಿಲನ್ನೂ ಲೆಕ್ಕಿಸದೇ ನೆರೆದಿದ್ದರು.

ಇನ್ನು, ಚುನಾವಣಾ ಪ್ರಚಾರ ನಡುವೆ ಪ್ರಧಾನಿಯವರು ಜರ್ಗಾಮ್ ನಲ್ಲಿ ಸಾಮಾನ್ಯ ಲಘು ಉಪಹಾರ ಚಾಟ್ಸ್ ಗೆ ಭೇಟಿ ನೀಡಿದರು. ಲೋಕಲ್ ಅಂಗಡಿಗೆ ಭೇಟಿ ಕೊಟ್ಟ ಪ್ರಧಾನಿ ಮೋದಿ ಚುರುಮುರಿ ನೀಡುವಂತೆ ಕೇಳಿದರು. ಅಂಗಡಿಯಾತನಿಗೆ 10 ರೂ. ಕೊಟ್ಟು ಚುರುಮುರಿ ಖರೀದಿಸಿದರು.

ಪ್ರಧಾನಿ ಲೋಕಲ್ ಅಂಗಡಿಗೆ ಬಂದಿದ್ದು ನೋಡಿ ಅಲ್ಲಿನ ಜನ ಅವರನ್ನು ಸುತ್ತುವರಿದಿದ್ದರು. ಇವರಲ್ಲಿ ಸಾಕಷ್ಟು ಜನ ಮಹಿಳೆಯರು, ಮಕ್ಕಳು ಸೇರಿದ್ದರು. ತಾವು ಖರೀದಿಸಿದ ಚುರುಮುರಿಯನ್ನು ಅವರಿಗೂ ಹಂಚಿ ತಾವೂ ತಿಂದು ಖುಷಿಪಟ್ಟರು.


pic.twitter.com/t0TcDeONxt

 

— Narendra Modi (@narendramodi) April 19, 2026

Share this Story:

Follow Webdunia kannada

ಮುಂದಿನ ಸುದ್ದಿ

ಯಶಸ್ಸಿನ ಲಾಭ ಮೋದಿಗೆ ಸಿಗುತ್ತದೆ ಎಂಬ ಭಯ ಕಾಂಗ್ರೆಸ್‍ಗೆ: ತೇಜಸ್ವಿ ಸೂರ್ಯ