Daily Horoscope

Select Your Language

Notifications

webdunia
webdunia
webdunia
webdunia

ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಹೊಸ ಇತಿಹಾಸ ಸೃಷ್ಟಿ: ಟಿಎಂಸಿ ವಿರುದ್ಧ ಗುಡುಗಿದ ಮೋದಿ

West Bengal Election
ಕೋಲ್ಕತ್ತಾ:  ಮುಂಬರುವ ಬಂಗಾಳದ ಚುನಾವಣೆ ಹೊಸ ಇತಿಹಾಸ ಸೃಷ್ಟಿಸಲಿದೆ. ಟಿಎಂಸಿ ನಾಯಕರು ಬಳಸುತ್ತಿರುವ ಭಾಷೆಗಳನ್ನ ನೋಡಿದ್ರೆ ಫಲಿತಾಂಶದ ಬಗ್ಗೆ ಅವರಿಗೆ ಇರುವ ಭಯವನ್ನು ತೋರಿಸುತ್ತದೆ  ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟಿಎಂಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಂಕುರಾದಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ತೃಣಮೂಲ ಕಾಂಗ್ರೆಸ್‌ ಪಕ್ಷ, ಕಾಂಗ್ರೆಸ್‌ ಜೊತೆಗೆ ಸೇರಿ ಪಿತೂರಿ ಮಾಡಿದೆ. ಈ ಮೂಲಕ ಬಂಗಾಳದ ಮಹಿಳೆಯರಿಗೆ ದ್ರೋಹ ಬಗೆದಿದೆ ಎಂದು ಕಿಡಿಕಾಡಿದರು. 

ನಾನು ಎಲ್ಲಾ ಟಿಎಂಸಿ ಗೂಂಡಾಗಳು, ಸಿಂಡಿಕೇಟ್‌ಗಳು ಮತ್ತು ಭ್ರಷ್ಟರಿಗೆ ಕೊನೇ ಅವಕಾಶ ನೀಡುತ್ತಿದ್ದೇನೆ. ಏಪ್ರಿಲ್‌ 29 ಕ್ಕೂ ಮೊದಲು ನಿಮ್ಮ ಹತ್ತಿರದ ಪೊಲೀಸ್‌ ಠಾಣೆಗಳಲ್ಲಿ ಶರಣಾಗಿ, ಮೇ 4 ರ ನಂತರ ಯಾರಿಗೂ ಉಳಿಗಾಲ ಇರೋದಿಲ್ಲ ಎಂದು ಮೋದಿ ಎಚ್ಚರಿಕೆ ನೀಡಿದರು. 

 ಟಿಎಂಸಿ ಬುಡಕಟ್ಟು ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನ ದ್ವೇಷಿಸುತ್ತದೆ. ನಾವು ಬುಡಕಟ್ಟು ಸಮುದಾಯವನ್ನ ಸಬಲೀಕರಣಗೊಳಿಸಲು ಬಯಸುತ್ತೇವೆ. ಅದಕ್ಕಾಗಿಯೇ ಬಿಜೆಪಿ ದೇಶಕ್ಕೆ ತನ್ನ ಮೊದಲ ಬುಡಕಟ್ಟು ಮಹಿಳಾ ಅಧ್ಯಕ್ಷೆಯನ್ನ ನೀಡಿತು. ಆದರೆ ಟಿಎಂಸಿ ಬುಡಕಟ್ಟು ಸಮುದಾಯವನ್ನು ಅವಮಾನಿಸುತ್ತದೆ ಎಂದರು.

ಭಾರತದ ರಾಷ್ಟ್ರಪತಿ ಬುಡಕಟ್ಟು ಸಮುದಾಯದವರಾಗಬೇಕೆಂದು ಎಂದಿಗೂ ಬಯಸಲಿಲ್ಲ. ಇಂದು, ಇಡೀ ಜಗತ್ತು ರಾಷ್ಟ್ರಪತಿ ಮುರ್ಮು ಅವರನ್ನ ಗೌರವಿಸುತ್ತದೆ, ಆದರೆ ಬುಡಕಟ್ಟು ವಿರೋಧಿ ಟಿಎಂಸಿ ಅವರನ್ನ ಅವಮಾನಿಸುತ್ತದೆ ಎಂದು ತಿವಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದನೆಂದು ಪ್ರಿಯಕರನ ಜತೆ ಸೇರಿ ಗಂಡನನ್ನೇ ಮುಗಿಸಿದ ಪಾಪಿ ಪತ್ನಿ