Select Your Language

Notifications

webdunia
webdunia
webdunia
webdunia

Karnataka Weather: ಕರ್ನಾಟಕದ ಈ ಜಿಲ್ಲೆಗಳಿಗೆ ಇಂದು ಮಳೆಯ ಸೂಚನೆ

Karnataka Rains
ಬೆಂಗಳೂರು: ವಿಪರೀತ ಬಿಸಿಲಿನ ಶಾಖದ ನಡುವೆಯೂ ಕೆಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ. ಇಂದು ಯಾವ ಜಿಲ್ಲೆಗಳಿಗೆ ಮಳೆ ಇಲ್ಲಿದೆ ಹವಾಮಾನ ವರದಿ.

ಕಳೆದ ಎರಡು, ಮೂರು ವಾರಗಳಿಂದ ಕರ್ನಾಟಕದಲ್ಲಿ ಬಿಸಿಲು ನೆತ್ತಿ ಸುಡುತ್ತಿದೆ. ಹೊರಗೆ ಕಾಲಿಡಲಾಗದ ವಾತಾವರಣವಿದೆ. ಇದರ ನಡುವೆಯೂ ಕೆಲವೆಡೆ ಮಳೆಯಾಗುತ್ತಿರುವುದು ವಿಶೇಷವಾಗಿದೆ. ಇಂದೂ ಕೆಲವು ಜಿಲ್ಲೆಗಳಿಗೆ ಉರಿಬಿಸಿಲಿದ್ದರೆ ಮತ್ತೆ ಕೆಲವು ಜಿಲ್ಲೆಗಳಿಗೆ ಮಳೆಯ ಸೂಚನೆಯಿದೆ.

ದಕ್ಷಿಣ ಕನ್ನಡ, ಚಿಕ್ಕಮಗಳೂರು, ಚಿತ್ರದುರ್ಗ, ಕೊಪ್ಪಳ, ಶಿವಮೊಗ್ಗ, ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸೂಚನೆಯಿದೆ. ಇನ್ನು ಕೊಡಗು, ಹಾಸನ, ಮೈಸೂರು, ಮಂಡ್ಯ, ಬೆಂಗಳೂರು, ಚಾಮರಾಜನಗರ, ರಾಮನಗರ, ವಿಜಯಪುರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ.

ಉಳಿದ ಜಿಲ್ಲೆಗಳಲ್ಲಿ ಇಂದೂ ಉರಿಬಿಸಿಲಿನ ವಾತಾವರಣವಿರಲಿದೆ. ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ತಲುಪಲಿದೆ. ಇಂದು ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 36 ಡಿಗ್ರಿಯಷ್ಟಿರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿಯಷ್ಟಿರಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಎಚ್‌ ವಿಶ್ವನಾಥ್‌ಗೆ ವಯಸ್ಸಾಗಿದೆ, ವಯಸ್ಸಿಗೆ ಬೆಲೆಕೊಟ್ಟು ಕ್ಷಮಿಸೋಣ: ಮಧು ಬಂಗಾರಪ್ಪ ವ್ಯಂಗ್ಯ