Publish Date: Mon, 27 Apr 2026 (08:33 IST)
Updated Date: Mon, 27 Apr 2026 (08:35 IST)
ಬೆಂಗಳೂರು: ರಾಜ್ಯದಲ್ಲಿ ಕಳೆದ ವಾರ ಬಿಸಿಲ ಬೇಗೆಯ ಜೊತೆ ಕೆಲವೇ ಜಿಲ್ಲೆಗಳಲ್ಲಿ ಮಳೆಯೂ ಬಂದಿತ್ತು. ಈ ವಾರವೂ ಬಿಸಿಲಿನ ತಾಪಮಾನ ವಿಪರೀತ ಏರಿಕೆಯಾಗಲಿದ್ದು, ಇದರ ಜೊತೆಗೆ ವಾರದ ಮಧ್ಯದಲ್ಲಿ ಮಳೆಯ ಸೂಚನೆಯೂ ಇದೆ.
ರಾಜ್ಯದಲ್ಲಿ ಈಗ ಕಡು ಬೇಸಿಗೆಯ ಹವಾಮಾನವಿದೆ. ರಾಯಚೂರು, ಕಲಬುರಗಿ, ಬಳ್ಳಾರಿ ಜಿಲ್ಲೆಗಳಲ್ಲಂತೂ ತಾಪಮಾನ 40 ಡಿಗ್ರಿ ಆಸುಪಾಸಿಗೆ ಬಂದಿತ್ತು. ಈ ವಾರವೂ ಆರಂಭದಲ್ಲಿ ತಾಪಮಾನ ವಿಪರೀತವಾಗಲಿದ್ದು, ವಾರದ ಮಧ್ಯ ಭಾಗದಲ್ಲಿ ಕೊಂಚ ಮಟ್ಟಿಗೆ ತಾಪಮಾನ ಕಡಿಮೆಯಾಗಲಿದೆ. ವಾರಂತ್ಯಕ್ಕೆ ಮತ್ತೆ ತಾಪಮಾನ ಏರಿಕೆಯಾಗಲಿದೆ.
ಹಲವು ಜಿಲ್ಲೆಗಳಲ್ಲಿ ಮಂಗಳವಾರದಿಂದ ಗುರುವಾರದವರೆಗೆ ಮಳೆಯ ಸೂಚನೆಯಿದೆ. ವಿಶೇಷವಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ, ಬೆಂಗಳೂರು, ರಾಮನಗರ, ಚಾಮರಾಜನಗರ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ಈ ವಾರ ಮಳೆಯ ಸೂಚನೆಯಿದೆ.
ಉಳಿದ ಜಿಲ್ಲೆಗಳಲ್ಲಿ ಈ ವಾರ ಉರಿಬಿಸಿಲಿನ ವಾತಾವರಣ ಮುಂದುವರಿಯಲಿದೆ. ಈ ವಾರ ರಾಜ್ಯದ ಗರಿಷ್ಠ ತಾಪಮಾನ ಆರಂಭದಲ್ಲಿ 36 ಡಿಗ್ರಿಯಷ್ಟಿದ್ದರೆ ನಂತರ 33 ಡಿಗ್ರಿಗೆ ಇಳಿಕೆಯಾಗಬಹುದು. ಕನಿಷ್ಠ ತಾಪಮಾನ 22 ಡಿಗ್ರಿಯಷ್ಟಿರಲಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ