Publish Date: Wed, 29 Apr 2026 (09:37 IST)
Updated Date: Wed, 29 Apr 2026 (09:43 IST)
ಕೋಲ್ಕತ್ತಾ: ಪಶ್ಚಿಮ ಬಂಗಾಲ ಚುನಾವಣೆ ಫಲಿತಾಂಶದ ಮೇಲೆ ಈ ಬಾರಿ ದೇಶವೇ ಕುತೂಹಲದಿಂದ ಕಾಯುತ್ತಿದೆ. ಬಂಗಾಲದಲ್ಲಿ ದೀದಿ ಆಡಳಿತ ಕೊನೆಯಾಗಬಹುದು ಎಂದು ಬಿಜೆಪಿ ಲೆಕ್ಕಾಚಾರ ಹಾಕಿದೆ. ಮಮತಾ ಬ್ಯಾನರ್ಜಿ ಸೋಲಿಗೆ ಕಾರಣವಾಗಬಹುದಾದ 5 ಅಂಶಗಳು ಯಾವುವು ಇಲ್ಲಿದೆ ನೋಡಿ ವಿಶ್ಲೇಷಣೆ.
ಮಮತಾ ಬ್ಯಾನರ್ಜಿ ಅವರು ಇನ್ನೂ ಬಲವಾದ ಜನಬೆಂಬಲ ಹೊಂದಿದ್ದರೂ, ಈ ಬಾರಿ ಭ್ರಷ್ಟಾಚಾರ, ನಿರುದ್ಯೋಗ ಮತ್ತು ಸಂಘಟಿತ ವಿರೋಧ ಪಕ್ಷದ ಹೋರಾಟವು ಅವರ ಹಾದಿಯನ್ನು ಕಠಿಣಗೊಳಿಸಿದೆ. ಮೇ 4ರ ಫಲಿತಾಂಶವು ಬಂಗಾಳದ ಈ 'ದೀದಿ' ಯುಗ ಮುಂದುವರಿಯುತ್ತದೆಯೇ ಅಥವಾ ಅಂತ್ಯವಾಗುತ್ತದೆಯೇ ಎಂಬುದನ್ನು ನಿರ್ಧರಿಸಲಿದೆ.
1. ಆಡಳಿತ ವಿರೋಧಿ ಅಲೆ
ಯಾವುದೇ ಪಕ್ಷ ಸತತವಾಗಿ ದೀರ್ಘಕಾಲ ಅಧಿಕಾರದಲ್ಲಿದ್ದಾಗ ಆಡಳಿತ ವಿರೋಧಿ ಅಲೆ ಸಹಜ. 15 ವರ್ಷಗಳ ಟಿಎಂಸಿ ಆಡಳಿತದ ನಂತರ, ಬಂಗಾಳದ ಜನ ಬದಲಾವಣೆಯನ್ನು ಬಯಸುತ್ತಿದ್ದಾರೆ. ವಿಶೇಷವಾಗಿ ಯುವಜನತೆ ಉದ್ಯೋಗಾವಕಾಶಗಳ ಕೊರತೆ ಮತ್ತು ಕೈಗಾರಿಕೆಗಳ ಸ್ಥಗಿತದ ಬಗ್ಗೆ ಅಸಮಾಧಾನ ಹೊಂದಿದ್ದಾರೆ.
2. ಭ್ರಷ್ಟಾಚಾರದ ಆರೋಪಗಳು:
ಕಳೆದ ಕೆಲವು ವರ್ಷಗಳಲ್ಲಿ ಟಿಎಂಸಿಯ ಹಲವು ಪ್ರಮುಖ ನಾಯಕರು ಭ್ರಷ್ಟಾಚಾರ ಮತ್ತು ಹಗರಣಗಳ ಆರೋಪದ ಮೇಲೆ ಸಿಬಿಐ ಅಥವಾ ಇಡಿ ತನಿಖೆಗೆ ಒಳಗಾಗಿದ್ದಾರೆ. 'ಸಿಂಡಿಕೇಟ್ ರಾಜ್' ಮತ್ತು ಸ್ಥಳೀಯ ಮಟ್ಟದ ನಾಯಕರ ಭ್ರಷ್ಟಾಚಾರವು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಿದ್ದು, ಇದು ಪಕ್ಷದ ಇಮೇಜ್‌ಗೆ ಧಕ್ಕೆ ತಂದಿದೆ.
3. ಮತದಾರರ ಪಟ್ಟಿ ಪರಿಷ್ಕರಣೆ
ಚುನಾವಣಾ ಆಯೋಗವು ನಡೆಸಿದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ (SIR) ಲಕ್ಷಾಂತರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದು ಟಿಎಂಸಿಯ ಸಾಂಪ್ರದಾಯಿಕ ಮತಬ್ಯಾಂಕ್ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ಇದರಿಂದ ತಮಗೆ ನ್ಯಾಯ ಸಿಕ್ಕಿಲ್ಲ ಎಂದು ಭಾವಿಸುವ ಒಂದು ವರ್ಗದ ಮತದಾರರು ಬಿಜೆಪಿಯತ್ತ ವಾಲುವ ಸಾಧ್ಯತೆಯಿದೆ.
4. ಬಿಜೆಪಿಯ ಆಕ್ರಮಣಕಾರಿ ಪ್ರಚಾರ ಮತ್ತು ಭರವಸೆಗಳು:
ಬಿಜೆಪಿಯು ಈ ಬಾರಿ ಮಹಿಳೆಯರಿಗಾಗಿ ವಾರ್ಷಿಕ ₹36,000 ಸಹಾಯಧನ ಮತ್ತು ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆಯ ಭರವಸೆ ನೀಡಿದೆ. ಮಮತಾ ಅವರ 'ಲಕ್ಷ್ಮೀರ್ ಭಂಡಾರ್' ಯೋಜನೆಗೆ ಪ್ರತಿಯಾಗಿ ಬಿಜೆಪಿ ನೀಡಿರುವ ಈ ಭರವಸೆಗಳು ಮಹಿಳಾ ಮತದಾರರನ್ನು ಸೆಳೆಯುತ್ತಿವೆ. ಅಲ್ಲದೆ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನೇರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ಪ್ರಚಾರವು ಟಿಎಂಸಿಗೆ ದೊಡ್ಡ ಸವಾಲಾಗಿದೆ.
5. ಧ್ರುವೀಕರಣ ಮತ್ತು ಅಲ್ಪಸಂಖ್ಯಾತ ಮತಗಳ ವಿಭಜನೆ:
ರಾಜ್ಯದಲ್ಲಿ ಹಿಂದುತ್ವದ ಅಲೆ ಹೆಚ್ಚುತ್ತಿರುವುದು ಮತ್ತು ಮತ್ತೊಂದೆಡೆ ಅಲ್ಪಸಂಖ್ಯಾತ ಮತಗಳು ಐಎಸ್‌ಎಫ್ (ISF) ಅಥವಾ ಇತರ ಪಕ್ಷಗಳ ನಡುವೆ ವಿಭಜನೆಯಾಗುತ್ತಿರುವುದು ಟಿಎಂಸಿಗೆ ಹಿನ್ನಡೆಯಾಗಬಹುದು. ಮತಗಳು ವಿಭಜನೆಯಾದಷ್ಟೂ ಅದರ ನೇರ ಲಾಭ ಬಿಜೆಪಿಗೆ ಸಿಗಲಿದೆ ಎಂಬುದು ರಾಜಕೀಯ ಲೆಕ್ಕಾಚಾರ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ