Select Your Language

Notifications

webdunia
webdunia
webdunia
webdunia

ಭಾರೀ ಗಾತ್ರದ ಹೆಬ್ಬಾವು ರಕ್ಷಿಸಿದವರು ಯಾರು?

ಹೆಬ್ಬಾವು
ಮೈಸೂರು , ಭಾನುವಾರ, 26 ಮೇ 2019 (15:37 IST)
ಭಾರೀ ಗಾತ್ರದ ಹೆಬ್ಬಾವು ಒಂದನ್ನು ರಕ್ಷಣೆ ಮಾಡಲಾಗಿದೆ.

ಮೈಸೂರಿನ ಖ್ಯಾತ ಉರಗ ತಜ್ಞ ಸ್ನೇಕ್ ಶಾಮ್ ರಿಂದ ಭಾರೀ ಗಾತ್ರದ ಹೆಬ್ಬಾವು ರಕ್ಷಣೆ ಮಾಡಲಾಗಿದೆ.

ಕಳೆದ ರಾತ್ರಿ  ಸುಮಾರಿಗೆ ಜೋರು ಮಳೆ ಬಿಳುತ್ತಿದ್ದ ಸಂದರ್ಭದಲ್ಲಿ ಕಾಣಿಸಿಕೊಂಡಿತ್ತು ಹೆಬ್ಬಾವು. ಮೈಸೂರಿನ ರಾಜೀವ್ ನಗರದಲ್ಲಿರುವ ಆರ್.ಟಿ.ಓ ಕಚೇರಿ 55 ರ ಬಳಿ ಕಾಣಿಸಿಕೊಂಡಿದ್ದ ಹೆಬ್ಬಾವು ರಕ್ಷಣೆ ಮಾಡಲಾಗಿದೆ.

ವಾಹನ ಚಾಲನಾ ಪರವಾನಗಿ ನೀಡುವ ಮುನ್ನಾ ನಡೆಯುವ ವಾಹನ ಪರೀಕ್ಷಾರ್ಥ ಚಾಲನಾ ಪಥದಲ್ಲಿದ್ದ ಹಾವನ್ನು ಗಮನಿಸಿದ್ದರು ಭದ್ರತಾ ಸಿಬ್ಬಂದಿ ಪ್ರಕಾಶ್. ನಂತರ ಸ್ನೇಕ್ ಶಾಮ್ ಗೆ ಕರೆ ಮಾಡಿ ತಿಳಿಸಿದ್ದರು ಪ್ರಕಾಶ್.

ಆ ಬಳಿಕ ಸ್ಥಳಕ್ಕಾಮಿಸಿ ಸುಮಾರು 8 ಅಡಿ ಉದ್ದದ್ದ  ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ ಸ್ನೇಕ್ ಶಾಮ್.

ಡಿ.ಸಿ.ಎಫ್ ಪ್ರಶಾಂತ್ ರವರ ಸಲಹೆಯ ಮೇರೆಗೆ  ರಕ್ಷಿಸಿರುವ ಹೆಬ್ಬಾವನ್ನು ಅರಣ್ಯಕ್ಕೆ ಬಿಡಲು ತೀರ್ಮಾನಿಸಿದ್ದಾರೆ ಸ್ನೇಕ್ ಶಾಮ್.




Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಎಂ ಕೃಷ್ಣರನ್ನು ಭೇಟಿ ಮಾಡಿದ ಅತೃಪ್ತ ಕಾಂಗ್ರೆಸ್ ಶಾಸಕರು; ಸರ್ಕಾರಕ್ಕೆ ಕಾದಿದೆಯಾ ಗಂಡಾಂತರ?