Select Your Language

Notifications

webdunia
webdunia
webdunia
webdunia

ಯುವಕರೇ ಎಚ್ಚರ!ಒಂಟಿ ಹೆಣ್ಣುಮಕ್ಕಳನ್ನು ಕೆಣುಕುವವರ ಮೇಲೆ ಸ್ಥಳದಲ್ಲೇ ದಾಖಲಾಗುತ್ತೆ ಕೇಸು

ಯುವಕರೇ ಎಚ್ಚರ!ಒಂಟಿ ಹೆಣ್ಣುಮಕ್ಕಳನ್ನು ಕೆಣುಕುವವರ ಮೇಲೆ ಸ್ಥಳದಲ್ಲೇ ದಾಖಲಾಗುತ್ತೆ ಕೇಸು
ಉಡುಪಿ , ಬುಧವಾರ, 3 ಏಪ್ರಿಲ್ 2019 (06:47 IST)
ಉಡುಪಿ: ಒಂಟಿ ಹೆಣ್ಣುಮಕ್ಕಳ ಮೇಲೆ ಯುವಕರ ದೌರ್ಜನ್ಯ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ಹೆಣ್ಣು ಮಕ್ಕಳ ರಕ್ಷಣೆಗಾಗಿ ಉಡುಪಿಯಲ್ಲಿ ಅಬ್ಬಕ್ಕ ಪಡೆ ಎಂಬ ಹೊಸ ಟೀಂಯೊಂದನ್ನು  ರಚಿಸಲಾಗಿದೆ.

ಉಡುಪಿ ಜಿಲ್ಲೆಗೆ ನಿಶಾ ಜೇಮ್ಸ್ ಎಸ್‍ಪಿ ಆಗಿ ಬಂದ ಮೇಲೆ ಮಹಿಳಾ ಪೊಲೀಸರನ್ನು ಸೇರಿಸಿಕೊಂಡು ಈ ಟೀಂ ನ್ನು ನಿರ್ಮಿಸಿದ್ದು, ಈ ತಂಡದಲ್ಲಿ ಮಹಿಳಾ ಎಸ್‍.ಐ, ಪೇದೆ ಇರುತ್ತಾರೆ. ಈ ಪಡೆಯ ಪೊಲೀಸರು ಜನ ನಿಬಿಡ ಪ್ರದೇಶದಲ್ಲಿ ಓಡಾಡುತ್ತಿರುತ್ತಾರೆ. ನಗರದ ಸುತ್ತಮುತ್ತ ಹೆಣ್ಣುಮಕ್ಕಳು ಒಬ್ಬಂಟಿಯಾಗಿದ್ದಾರೆ ಅಂತ ಕೆಣಕಲು ಹೋದರೆ ಸ್ಥಳದಲ್ಲಿಯೇ ಅವರ ಮೇಲೆ ಕೇಸ್ ದಾಖಲಾಗುತ್ತದೆ.

 

ಸಮಾವೇಶಗಳು- ಸಾರ್ವಜನಿಕ ಸಭೆಗಳು ನಡೆಯುವಲ್ಲಿ ಈ ಅಬ್ಬಕ್ಕ ಪಡೆ ಮಹಿಳೆಯ ರಕ್ಷಣೆಗೆ ಹಾಜರಿರುತ್ತದೆ. ಬೆಳಗ್ಗೆ ಸಂಜೆ ಬಸ್ ನಿಲ್ದಾಣ- ಮಾರುಕಟ್ಟೆ ಪ್ರದೇಶಗಳಲ್ಲಿ ಈ ಟೀಂ ಓಡಾಡುತ್ತಿರುತ್ತದೆ. ಚಾಲಕ ಒಬ್ಬ ಬಿಟ್ಟು ಅಬ್ಬಕ್ಕ ಪಡೆಯಲ್ಲಿ ಎಲ್ಲ ಮಹಿಳೆಯರೇ ಇದ್ದಾರೆ. ತಂಡಕ್ಕೊಂದು ಗಸ್ತು ವಾಹನ ಕೊಡಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರ ಸ್ವೀಕರಿಸಿದಾಗಲೇ ಪ್ರಧಾನಿ ಮೋದಿಯನ್ನು ಸೋಲಿಸುವ ಬಗ್ಗೆ ಚಿಂತನೆ ಮಾಡಿದ್ರಂತೆ ಸಿಎಂ-ಡಿಸಿಎಂ