Publish Date: Sat, 23 Mar 2019 (12:25 IST)
Updated Date: Sat, 23 Mar 2019 (12:27 IST)
ಬೆಂಗಳೂರು: ಪತ್ನಿ ಮೇಲೆ ಪತಿ ಕೈ ಮಾಡುವ ಘಟನೆಗಳು ಸಾಕಷ್ಟು ವರದಿಯಾಗುತ್ತವೆ. ಅದೇ ರೀತಿ ಪತ್ನಿಯರೂ ಪತಿ ಮೇಲೆ ದೈಹಿಕವಾಗಿ ಹೊಡೆದು ಬಡಿದು ಮಾಡುವಂತಹ ಘಟನೆಗಳೂ ಕೆಲವೊಂದು ಮನೆಯಲ್ಲಿ ನಡೆಯುತ್ತದೆ.
ಆದರೆ ಮಕ್ಕಳ ಕಾರಣಕ್ಕೋ, ಸಮಾಜಕ್ಕೆ ಹೆದರಿಯೋ ಪುರುಷರೂ ಕೆಲವೊಮ್ಮೆ ಪತ್ನಿಗೆ ವಿಚ್ಛೇದನ ನೀಡಲಾರದೆ, ಹಿಂಸೆ ಅನುಭವಿಸಲೂ ಆಗದೇ ಕೊರಗುವುದಿದೆ.
ಇಂತಹ ಸಂದರ್ಭದಲ್ಲಿ ಹಿರಿಯರ ಮೂಲಕ ಮಾತುಕತೆ ನಡೆಸಿ, ಅಥವಾ ಪತಿ-ಪತ್ನಿಯರೇ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಬಹುದು. ಅದು ಸಾಧ್ಯವೇ ಆಗದಿದ್ದರೆ ಕೆಲವೊಂದು ಸಮಯಗಳ ಕಾಲ ಬೇಕೆಂದೇ ಪತ್ನಿಯಿಂದ ದೂರವಾಗಿ ಜೀವನ ಮಾಡಿ. ಬಹುಶಃ ನಿಮ್ಮ ಅಗತ್ಯತೆ, ಅನುಪಸ್ಥಿತಿಯಲ್ಲಿ ಆಕೆಗೆ ಮತ್ತೆ ಪತಿ ಬೇಕು ಎನ್ನುವ ಭಾವನೆ ಬರಬಹುದು. ಕಬ್ಬಿಣ ಕಾದಾಗಲೇ ಬಡಿಯಬೇಕು ಎನ್ನುತ್ತಾರಲ್ಲಾ?
ಹಾಗೆಯೇ ಪರಸ್ಪರ ದೂರವಾದಾಗ ನೀನು ಬೇಕು ಎಂಬ ಭಾವನೆ ಮೂಡಿದಾಗ ನಿಮ್ಮ ನೋವು ಹೇಳಿಕೊಂಡು ಆ ಸ್ವಭಾವವನ್ನು ಬದಲಾಯಿಸಲು ಪ್ರಯತ್ನಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ