Publish Date: Wed, 20 Mar 2019 (11:30 IST)
Updated Date: Wed, 20 Mar 2019 (11:32 IST)
ಬೆಂಗಳೂರು: ಯಾವುದೋ ಕಾರಣಕ್ಕೆ ಬೇರೆಯಾದ ಜೋಡಿ ಜೀವಗಳು ಮತ್ತೆ ಯಾವಾಗಲೋ ಒಂದಾಗಬೇಕೆಂದು ಬಯಸುವುದು ಇದೆ. ಸಿನಿಮಾಗಳಲ್ಲಿ ಇಂತಹ ಸಾಕಷ್ಟು ಸೀನ್ ನೋಡುತ್ತೇವೆ.
ನಿಜ ಜೀವನದಲ್ಲೂ ಹಳೆಯ ಗೆಳೆಯ ಎಷ್ಟೋ ಸಮಯದ ನಂತರ ಮದುವೆಯಾಗುತ್ತೇನೆಂದು ಬಂದರೆ ಏನು ಮಾಡೋದು? ಅವನನ್ನು ಸ್ವೀಕರಿಸುವುದಾ? ಬೇಡವಾ ಎಂಬ ಗೊಂದಲ ಮನಸ್ಸಿಗೆ ಬರುತ್ತದೆ.
ಮೊದಲಿಗೆ ಆತನಿಗೆ ತಕ್ಷಣವೇ ಒಪ್ಪಿಗೆ ಕೊಡಬೇಡಿ. ನಿಮಗೆ ಆತನೊಂದಿಗೆ ಸಂಬಂಧ ಮತ್ತೆ ಶುರು ಮಾಡಲು ಆತಂಕವೇನಾದರೂ ಇದ್ದರೆ ಅದನ್ನು ಹಂಚಿಕೊಳ್ಳಿ. ಅದಕ್ಕೆ ಸ್ಪಷ್ಟನೆ ಪಡೆಯಿರಿ. ಯಾಕೆಂದರೆ ಒಮ್ಮೆ ಮೋಸ ಮಾಡಿ ಹೋದವನು ಮತ್ತೆ ಮೋಸ ಮಾಡಬಾರದು ಎಂದೇನಿಲ್ಲವಲ್ಲಾ?
ಅಥವಾ ಒಂದು ವೇಳೆ ನಿಮ್ಮ ನಡುವಿನ ಜಗಳದಿಂದಾಗಿಯೋ, ಅನಿರೀಕ್ಷಿತ ಘಟನೆಯೊಂದರಿಂದ ಮನಸ್ಸಿಗೆ ಬೇಸರವಾಗಿ ದೂರವಾಗಿದ್ದರೆ, ಮತ್ತೆ ಅಂತಹ ತಪ್ಪುಗಳಾಗಲ್ಲ ಎಂಬ ಖಾತ್ರಿಯಿದ್ದರೆ ಮಾತ್ರ ಆ ಗೆಳೆಯನಿಗೆ ಮತ್ತೊಂದು ಅವಕಾಶ ಕೊಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ