Select Your Language

Notifications

webdunia
webdunia
webdunia
webdunia

ಲವರ್ ನ ಈ ಸೀಕ್ರೆಟ್ ಗಳನ್ನು ಯಾರ ಬಳಿಯೂ ಬಾಯಿ ಬಿಡಬೇಡಿ!

ಲವರ್ ನ ಈ ಸೀಕ್ರೆಟ್ ಗಳನ್ನು ಯಾರ ಬಳಿಯೂ ಬಾಯಿ ಬಿಡಬೇಡಿ!
ಬೆಂಗಳೂರು , ಬುಧವಾರ, 5 ಡಿಸೆಂಬರ್ 2018 (09:18 IST)
ಬೆಂಗಳೂರು: ಮದುವೆ ಸಂಬಂಧದಷ್ಟೇ ಪ್ರೀತಿಯ ಸಂಬಂಧದಲ್ಲೂ ನಂಬಿಕೆ ಎನ್ನುವುದು ತುಂಬಾ ಮುಖ್ಯ. ಲವ್ ಲೈಫ್ ಉಳಿಸಿಕೊಳ್ಳಬೇಕಾದರೆ ಕೆಲವು ವಿಚಾರಗಳನ್ನು ನಿಮ್ಮ ಇತರ ಆಪ್ತರು, ಸ್ನೇಹಿತರ ಬಳಿ ಬಾಯಿಬಿಡುವಂತಿಲ್ಲ!


ಕೆಟ್ಟ ನೆನಪುಗಳು
ಲವರ್ ನ ಜೀವನದಲ್ಲಿ ನಡೆದಿದ್ದ ಯಾವುದೋ ಘಟನೆಗಳನ್ನು, ಅಭ್ಯಾಸಗಳನ್ನು ನಿಮ್ಮ ಬಳಿ ಹಂಚಿಕೊಳ್ಳಬಹುದು. ಹಾಗಂತ ಇದನ್ನು ಸ್ನೇಹಿತರ ಬಳಿ ಹೇಳಿ ಆತ/ಆಕೆಗೆ ಅವಮಾನ ಮಾಡಬೇಡಿ. ಆತ/ಆಕೆ ನಿಮ್ಮನ್ನು ನಂಬಿ ನಿಮ್ಮೊಡನೆ ಕೆಲವು ರಹಸ್ಯಗಳನ್ನು ಹೇಳಬಹುದು. ಅದನ್ನು ನೀವು ಬೇರೆಯವರಿಗೆ ಹೇಳುವುದರಿಂದ ನಂಬಿಕೆ ಒಡೆದಂತಾಗುತ್ತದೆ.

ಪ್ರೇಮಿಯ ಪ್ರೀತಿಪಾತ್ರರ ಬಗ್ಗೆ
ಪ್ರೇಮಿಯ ಪ್ರೀತಿಪಾತ್ರರು, ತಂದೆ-ತಾಯಿ ಬಗ್ಗೆ ಮಾತನಾಡುವಾಗ ಹುಷಾರಾಗಿರಿ. ಪ್ರೇಮಿ ಇಷ್ಟಪಡುವ ವ್ಯಕ್ತಿಗಳ ಬಗ್ಗೆ ಆತನ ಹಿಂದೆ ಅವಹೇಳನ ಮಾಡುವ ರೀತಿ ಮಾತನಾಡಬೇಡಿ. ಅವರನ್ನು ನೀವೂ ಗೌರವಿಸಲೇಬೇಕಾಗುತ್ತದೆ.

ಹಣಕಾಸಿನ ವಿಚಾರ
ಪ್ರೇಮಿ ಹಣಕಾಸಿನ ಮುಗ್ಗಟ್ಟಿನಲ್ಲಿದ್ದರೆ ಅದನ್ನು ಬೇರೆಯವರ ಎದುರು ಹೇಳಿಕೊಂಡು ಮುಜುಗರವುಂಟುಮಾಡಬೇಡಿ. ಇದರಿಂದ ಆತನಿಗೆ ನಿಮ್ಮ ಮೇಲೆ ನಂಬಿಕೆ ಹೊರಟುಹೋಗಬಹುದು.

ಪ್ರೇಮಿ ಕೊಟ್ಟ ಗಿಫ್ಟ್
ಪ್ರೇಮಿ ತನ್ನ ಸಂಗಾತಿಗೆ ಕೊಟ್ಟ ಗಿಫ್ಟ್ ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ಪ್ರೇಮಿ ಕೊಡುವ ಗಿಫ್ಟ್ ನಿಮಗೆ ಇಷ್ಟವಾಗಲಿಲ್ಲವೆಂದು ಅದನ್ನು ನಿಮ್ಮ ಸಹೋದರ/ಸಹೋದರಿಗೋ, ಸ್ನೇಹಿತರಿಗೋ ಅಥವಾ ಇನ್ಯಾರಿಗೋ ದಾನ ಮಾಡಬೇಡಿ. ಇದರಿಂದ ಪ್ರೇಮಿಯ ಮನಸ್ಸು ನೋಯಿಸಿದಂತಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಹುಳಕಡ್ಡಿ ಹಾಗೂ ಅದರಿಂದಾದ ಕಲೆ ವಾಸಿಯಾಗಲು ಇಲ್ಲಿದೆ ಮನೆಮದ್ದು